ADVERTISEMENT

ಹಬ್ಬದ ಮೆರುಗು ಹೆಚ್ಚಿಸಿದ ಭಜನೆ

ಕೋದಂಡರಾಮ ಮಂಡಳಿಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 4:23 IST
Last Updated 16 ಜನವರಿ 2022, 4:23 IST
ಕನಕಪುರದಲ್ಲಿ ಶನಿವಾರ ನಡೆದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೋದಂಡರಾಮ ಭಜನಾ ಮಂಡಳಿ ಸದಸ್ಯರು
ಕನಕಪುರದಲ್ಲಿ ಶನಿವಾರ ನಡೆದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೋದಂಡರಾಮ ಭಜನಾ ಮಂಡಳಿ ಸದಸ್ಯರು   

ಕನಕಪುರ: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ, ಜಾತ್ರೆಗಳು ಎಷ್ಟು ವಿಶೇಷವೋ ಅದೇ ರೀತಿ ಗಣೇಶನ ಹಬ್ಬ, ಭಜನಾ ಕಾರ್ಯಕ್ರಮವೂ ಮಹತ್ವದ್ದಾಗಿದೆ. ಧನುರ್ಮಾಸ ಪೂಜಾ ಕಾರ್ಯಕ್ರಮವೂ ವಿಶೇಷವಾಗಿದೆ.

ಹಿಂದಿನ ಕಾಲದಲ್ಲಿ ಪ್ರತಿ ಗ್ರಾಮದಲ್ಲೂ ಒಂದು ಭಜನಾ ತಂಡ ಇರುತ್ತಿತ್ತು. ಭಜನೆ ಮನೆಗಳಿರುತ್ತಿದ್ದವು. ಧನುರ್ಮಾಸ ಪೂಜಾ ಸಂದರ್ಭದಲ್ಲಿ ಬೆಳಿಗ್ಗೆ 4 ಗಂಟೆಗೆ ಗ್ರಾಮದ ಎಲ್ಲಾ ಬೀದಿಗಳಲ್ಲಿ ಭಜನಾ ತಂಡದವರು ಮನೆ ಮನೆಗೆ ಬಂದು ಪೂಜೆ ಸ್ವೀಕರಿಸುತ್ತಿದ್ದರು.

ಕಾಲ ಬದಲಾದಂತೆ ಭಜನಾ ತಂಡಗಳು, ಭಜನೆ ಮನೆಗಳು ಕಣ್ಮರೆಯಾಗುತ್ತಿವೆ. ಅದಾಗಿಯೂ ಕೆಲವು ಕಡೆ ಭಜನಾ ಕಾರ್ಯಕ್ರಮ ಇಂದಿಗೂ ಆಚರಣೆಗೊಳ್ಳುತ್ತಿದೆ. ನಗರದ ಮಳಗಾಳು ಗ್ರಾಮದಲ್ಲಿ ಮತ್ತು ಪೇಟೆ ಬೀದಿಯ ಕೋದಂಡರಾಮ ಭಜನಾ ಮಂಡಳಿಯವರು ಒಂದು ತಿಂಗಳಿಂದ ಧನುರ್ಮಾಸ ಪೂಜೆಯಲ್ಲಿ ಭಜನೆ ಪ್ರಾರಂಭಿಸಿ ಸಂಕ್ರಾಂತಿ ಹಬ್ಬಕ್ಕೆ ಮುಕ್ತಾಯಗೊಳಿಸಿದರು.

ADVERTISEMENT

ಶನಿವಾರ ಭಜನಾ ತಂಡದವರು ಪ್ರತಿ ಮನೆಗೆ ಭೇಟಿ ನೀಡಿ ಪೂಜೆ ಸ್ವೀಕರಿಸಿ ಭಜನೆಯ ಮೆರುಗನ್ನು
ಹೆಚ್ಚಿಸಿದರು.

ಮಳಗಾಳು ಗ್ರಾಮದಲ್ಲಿ ದೊಡ್ಡವರು, ಯುವಕರ ಜತೆಗೆ ಪುಟಾಣಿ ಮಕ್ಕಳು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಸಾರಾಂಶ

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ, ಜಾತ್ರೆಗಳು ಎಷ್ಟು ವಿಶೇಷವೋ ಅದೇ ರೀತಿ ಗಣೇಶನ ಹಬ್ಬ, ಭಜನಾ ಕಾರ್ಯಕ್ರಮವೂ ಮಹತ್ವದ್ದಾಗಿದೆ. ಧನುರ್ಮಾಸ ಪೂಜಾ ಕಾರ್ಯಕ್ರಮವೂ ವಿಶೇಷವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.