ADVERTISEMENT

‘ಆಹಾರ ಇಲಾಖೆಯಿಂದ ದುರುದ್ದೇಶದ ದಾಳಿ’

ಅಕ್ಕಿಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 5:56 IST
Last Updated 21 ಜನವರಿ 2022, 5:56 IST
ಮಂಡ್ಯ ಜಿಲ್ಲೆಯ ಅಕ್ಕಿ ಗಿರಣಿಗಳ ಮೆಲೆ ಆಹಾರ ಇಲಾಖೆ ಅಧಿಕಾರಿಗಳು ದುರುದ್ದೇಶದಿಂದ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಕ್ಕಿಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಮಂಡ್ಯ ಜಿಲ್ಲೆಯ ಅಕ್ಕಿ ಗಿರಣಿಗಳ ಮೆಲೆ ಆಹಾರ ಇಲಾಖೆ ಅಧಿಕಾರಿಗಳು ದುರುದ್ದೇಶದಿಂದ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಕ್ಕಿಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಜಿಲ್ಲೆಯ ಅಕ್ಕಿ ಗಿರಣಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದುರುದ್ದೇಶದಿಂದ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಕ್ಕಿಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪದಾಧಿಕಾರಿಗಳು ಆಹಾರ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು.

2021–22ನೇ ಸಾಲಿನ ಎಂಎಸ್‌ಪಿ ಯೋಜನೆಯನ್ನು ಪ್ರಾರಂಭಿಸಲು ಇದುವರೆಗೂ ಹಲ್ಲಿಂಗ್‌ನ ದರಪಟ್ಟಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಜತೆಗೆ ಗಿರಣಿ ಮಾಲೀಕರೊಂದಿಗೆ ಚರ್ಚಿಯನ್ನೂ ನಡೆಸದೆ ಈ ಹಿಂದಿನ ಸಾಲಿನ ಹಲ್ಲಿಂಗ್‌ ದರಪಟ್ಟಿಗಿಂತ ಕಡಿಮೆ ದರ ನಿಗದಿಪಡಿಸಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಪ್ರಸ್ತುತ ಸಾಲಿನ ಎಂಎಸ್‌ಪಿ ಯೋಜನೆಯಡಿ ಜಿಲ್ಲೆಯ ರೈತರು ಕಳೆದ ಸಾಲಿನ ರೀತಿಯಲ್ಲೇ ಸಮೀಪದ ಗಿರಣಿಗಳಿಗೆ ಭತ್ತವನ್ನು ಸರಬರಾಜು ಮಾಡಿದ್ದು, ತಿಂಗಳುಗಳು ಕಳೆದಿವೆ. ಸರ್ಕಾರದ ವಿಳಂಬ ನೀತಿಯಿಂದ ಭತ್ತವನ್ನು ಸರಬರಾಜು ಮಾಡಿರುವ ರೈತರು ಗಿರಣಿ ಮಾಲೀಕರಿಗೆ ಸರಬರಾಜು ಮಾಡಿರುವ ಭತ್ತಕ್ಕೆ ದಾಸ್ತಾನಿನ ಚೀಟಿಯನ್ನು ಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.

ಕಾನೂನಿನಡಿಯಲ್ಲಿ ಭತ್ತ, ಅಕ್ಕಿ, ನುಚ್ಚನ್ನು ಖರೀದಿಸಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದರೂ ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಗಿರಣಿ ಮಾಲೀಕರ ಮೇಲೆ ಪದೇ ಪದೇ ದುರುದ್ದೇಶದ ದಾಳಿ ನಡೆಸುತ್ತಿದ್ದಾರೆ. ಅಕ್ಕಿ ಗಿರಣಿಯಲ್ಲಿರುವ ಹಲ್ಲಿಂಗ್‌ನ ದಾಸ್ತಾನನ್ನು ಕಂಡು ‘ಇದು ಮೇಲ್ನೋಟಕ್ಕೆ ಅಥವಾ ಅನುಮಾನದ ಆಧಾರದ ಮೇಲೆ ಪಡಿತರ ಅಕ್ಕಿ’ ಎಂದು ಪ್ರಕರಣ ದಾಖಲಿಸುತ್ತಿದ್ದಾರೆ. ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಸಂಘದ ಎಂ.ಎಸ್‌.ರಮೇಶ್‌, ಎ.ಎಚ್.ನಾರಾಯಣ್‌, ಎಚ್‌.ಸಿ. ಮಹೇಶ್‌, ಎಸ್‌.ಆನಂದ, ಕೆ.ಎಂ.ಉದಯ್‌ಕುಮಾರ್, ಶಿವಣ್ಣ ಇದ್ದರು.

ಸಾರಾಂಶ

ಮಂಡ್ಯ: ಜಿಲ್ಲೆಯ ಅಕ್ಕಿ ಗಿರಣಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದುರುದ್ದೇಶದಿಂದ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಕ್ಕಿಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.