ADVERTISEMENT

ಮೈಷುಗರ್‌ ಉಳಿವಿಗೆ ಕೊನೆಯ ಹೋರಾಟ: ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 7:27 IST
Last Updated 18 ಅಕ್ಟೋಬರ್ 2021, 7:27 IST
ಮೈಷುಗರ್‌ ಕಾರ್ಖಾನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರು ಆಹ್ವಾನಿಸಿರುವ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಅವರು ಮಂಡ್ಯ ನಗರದ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದರು. ಶಾಸಕರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕಲ್ಪನಾ ಸಿದ್ದರಾಜು, ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ ಇದ್ದರು
ಮೈಷುಗರ್‌ ಕಾರ್ಖಾನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರು ಆಹ್ವಾನಿಸಿರುವ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಅವರು ಮಂಡ್ಯ ನಗರದ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದರು. ಶಾಸಕರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕಲ್ಪನಾ ಸಿದ್ದರಾಜು, ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ ಇದ್ದರು   

ಮಂಡ್ಯ: ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಉಳಿಸಿಕೊಳ್ಳಬೇಕು ಎಂಬುದು ಕೊನೆಯ ಹೋರಾಟವಾಗಿದ್ದು, ಜಿಲ್ಲೆಯ ರೈತರು ಮತ್ತು ಹೋರಾಟಗಾರರು ಒಂದಾಗಿ ಒತ್ತಾಯಿಸಬೇಕು. ಮುಖ್ಯಮಂತ್ರಿ ಆಹ್ವಾನ ನೀಡಿರುವ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಆಗ್ರಹಿಸಲಾಗುವುದು ಎಂದು ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಹೇಳಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆರಂಭಿಸಿರುವ ಅನಿರ್ದಿ
ಷ್ಟಾವಧಿ ಧರಣಿಯು ಭಾನುವಾರ 35ನೇ ದಿನ ಪೂರೈಸಿದ್ದು, ಧರಣಿ ಬೆಂಬಲಿಸಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.18 ರಂದು ಕರೆದಿರುವ ಸಭೆಯ ಕುರಿತ ಪೂರ್ವಭಾವಿ ಸಭೆಯಲ್ಲಿ
ಅವರು ಮಾತನಾಡಿದರು.

ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಆರಂಭಿಸಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ನೀಡಿ ಕ್ರಮ ಕೈಗೊಳ್ಳಬೇಕು. ಇದು ಜಿಲ್ಲೆಯ ರೈತರ ಹಾಗೂ ಹೋರಾಟಗಾರರ ಒಮ್ಮತವಾಗಿದೆ. ಮುಖ್ಯಮಂತ್ರಿ ಅವರು ಆಹ್ವಾನಿಸಿರುವ ಸಭೆಯಲ್ಲಿ ನಾನು ಭಾಗವಹಿಸಲಿದ್ದು, ಅವರ ಜೊತೆ ಮಾತುಕತೆ ನಡೆಸುತ್ತೇನೆ. ಈಗ ಆರಂಭವಾದರೆ ಮುಂದೆ ಎಂದೂ ಕಾರ್ಖಾನೆ ನಿಲ್ಲಬಾರದು ಎಂಬ ಸ್ಪಷ್ಟ ನಿರ್ಧಾರ ಮಾಡಲು ಒತ್ತಾಯಿಸಲಾಗುವುದು ಎಂದರು.

ADVERTISEMENT

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಉಳಿಸಿಕೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡುವರು ಎಂಬ ವಿಶ್ವಾಸವಿದೆ. ಇತಿಹಾಸ ಇರುವಂಥ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಈಗಾಗಲೇ ಜಿಲ್ಲೆಯಲ್ಲಿ ಮೈಷುಗರ್‌ ಪರವಾಗಿ ಕೂಗು ಕೇಳಿಬಂದಿದೆ. ಈ ಕಾರಣದಿಂದ ಕಾರ್ಖಾನೆ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು ಎಂದು ಅವರು ತಿಳಿಸಿದರು. 

ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕಲ್ಪನಾ ಸಿದ್ದರಾಜು, ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಸಿಐಟಿಯುನ ಸಿ.ಕುಮಾರಿ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಕೆ.ಎಸ್.ಸುಧೀರ್‌ಕುಮಾರ್, ಎಂ.ಬಿ.ಶ್ರೀನಿವಾಸ್, ಮಂಜುನಾಥ್, ಸಿ.ಡಿ.ಗಂಗಾಧರ್, ಎಂ.ಡಿ.ಜಯರಾಂ, ಬೋರಾಪುರ ಶಂಕರೇಗೌಡ ಭಾಗವಹಿಸಿದ್ದರು.

ಸಾರಾಂಶ

ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಉಳಿಸಿಕೊಳ್ಳಬೇಕು ಎಂಬುದು ಕೊನೆಯ ಹೋರಾಟವಾಗಿದ್ದು, ಜಿಲ್ಲೆಯ ರೈತರು ಮತ್ತು ಹೋರಾಟಗಾರರು ಒಂದಾಗಿ ಒತ್ತಾಯಿಸಬೇಕು. ಮುಖ್ಯಮಂತ್ರಿ ಆಹ್ವಾನ ನೀಡಿರುವ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಆಗ್ರಹಿಸಲಾಗುವುದು ಎಂದು ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.