ಕನಕಗಿರಿ: ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಆಶೋತ್ತರಗಳ ಧ್ವನಿಯಾಗಿದೆ ಎಂದು ಧಾರವಾಡ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡಿ. ಡೊಳ್ಳಿನ್ ತಿಳಿಸಿದರು.
ಇಲ್ಲಿನ ರಮೇಶರೆಡ್ಡಿ ಓಣಿಮನಿ ಅವರ ಕೊಠಡಿಯಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಅಭಿನಂದನೆ ಹಾಗೂ ಕಸಾಪ ಆಜೀವ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮೌರ್ಯ ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಕನಕಗಿರಿಯು ತನ್ನದೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇತಿಹಾಸದ ಪುಟದಲ್ಲಿ ಸೇರಿರುವ ವೆಂಕಟಪತಿಭಾವಿ (ರಾಣಿ ಸ್ನಾನಗೃಹ), ಪುಷ್ಕರಣಿ ಇತರೆ ಸ್ಮಾರಕಗಳು ಅಳಿವಿನ ಅಂಚಿನಲ್ಲಿವೆ. ಅವುಗಳ ಜೀರ್ಣೋದ್ಧಾರದ ಜತೆಗೆ ಈ ಭಾಗದ ಜನಪದ ಕಲೆ, ಪರಂಪರೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಇಲ್ಲಿನ ಸ್ಮಾರಕಗಳು,ಸಾಹಿತ್ಯ ಹಾಗೂ ಇತಿಹಾಸವನ್ನು ಮುದ್ರಣ ಹಾಗೂ ಇತರ ಡಿಜಿಟಲ್ ಮಾಧ್ಯಮಗಳಲ್ಲಿ ದಾಖಲಿಸಿ ಜಗತ್ತಿನಾದ್ಯಂತ ಪ್ರಚುರಪಡಿಸುವ ಕಾರ್ಯಗಳಾಗಬೇಕೆಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಮಾತನಾಡಿ, ಅವಿಭಜಿತ ಗಂಗಾವತಿ ತಾಲ್ಲೂಕಿನ ಕಾರಟಗಿ, ಕನಕಗಿರಿ ಭಾಗಗಳು ಆಡಳಿತಾತ್ಮಕವಾಗಿ ವಿಂಗಡಣೆಯಾಗಿದ್ದರೂ ಕೂಡ ಸಾಂಸ್ಕೃತಿಕ ಹಾಗೂ ಭಾವನಾತ್ಮಕವಾಗಿ ಒಂದೇ ಆಗಿವೆ. ಈ ಭಾಗದ ವ್ಯಕ್ತಿಯಾಗಿರುವ ನನಗೆ ಜಿಲ್ಲಾ ಕಸಾಪದ ಚುಕ್ಕಾಣಿ ದೊರೆತಿದೆ. ಐತಿಹಾಸಿಕ ,ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ರಾಜಶೇಖರ ಅಂಗಡಿ ಹಾಗೂ ಮೆಹಬೂಬ ಹುಸೇನ್ ಮಾತನಾಡಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶನಾಯಕ, ತಾ.ಪಂ.ಮಾಜಿ ಅಧ್ಯಕ್ಷ ಹೊನ್ನೂರಸಾಬ, ಸದಸ್ಯ ತುಕಾರಾಮಪ್ಪ, ಶಿಕ್ಷಕ ಬಾಲಾಜಿ, ಕನಕರೆಡ್ಡಿ ಕೆರಿ, ನಿವೃತ್ತ ಮುಖ್ಯಶಿಕ್ಷಕ ಬಸವರಾಜ ಸಜ್ಜನ್, ಬೆಟ್ಟಪ್ಪ ಜೀರಾಳ, ರಂಗಾರೆಡ್ಡಿ,ಮಲಕೇಶ ಕೋಟಿ ಮಾತನಾಡಿದರು.
ಮಲ್ಲಿಕಾರ್ಜುನ ಸಜ್ಜನ್ ಅವರನ್ನು ಈ ಸಮಯದಲ್ಲಿ ಸನ್ಮಾನಿಸಲಾಯಿತು.
ಪ್ರಮುಖರಾದ ಪಾಂಡುರಂಗ ಜನಾದ್ರಿ, ಗೋಸ್ಲೆಪ್ಪ ಗದ್ದಿ, ಶ್ರೀಶೈಲಪಾಟೀಲ, ಕನಕರೆಡ್ಡಿ ಮಾದಿನಾಳ, ಗೋಪಿನಾಥ ಭಾಂಡಗೆ, ತಿಪ್ಪಣ್ಣ ಮಡಿವಾಳರ, ಪ್ರವೀಣಕುಮಾರ ಕೋರಿ, ರಮೇಶರೆಡ್ಡಿ, ಹನುಮೇಶ ಕಲಕೇರಿ, ಮಹ್ಮದ ಷರೀಪ್ ವಟಪರ್ವಿ, ರವಿ ಪಾತ್ರದ, ಚಾಂದಪಾಷ, ವಿನೋದ, ವೀರೇಶ ಹಾದಿಮನಿ, ಶಿವಕುಮಾರ ಸಜ್ಜನ್ ಇದ್ದರು.
ಕನಕಗಿರಿ: ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಆಶೋತ್ತರಗಳ ಧ್ವನಿಯಾಗಿದೆ ಎಂದು ಧಾರವಾಡ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡಿ. ಡೊಳ್ಳಿನ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.