ADVERTISEMENT

ಕೋಲಾರ: ಶಿಕ್ಷಕರ ವರ್ಗಾವಣೆ; 24ರಿಂದ ಕೌನ್ಸೆಲಿಂಗ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 13:42 IST
Last Updated 21 ಜನವರಿ 2022, 13:42 IST

ಕೋಲಾರ: 2020–21ನೇ ಸಾಲಿನ ಅಂತರ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ಅಥವಾ ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ ಜ.24ರಿಂದ ಫೆ.3ರವರೆಗೆ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ರೇವಣ ಸಿದ್ದಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಬಂದಿರುವ ವೇಳಾಪಟ್ಟಿಯಂತೆ ಜಿಲ್ಲಾ ಕೇಂದ್ರದ ಡಿಡಿಪಿಐ ಕಚೇರಿಯ ಎಸ್‌ಎಸ್‌ಎ ವಿಭಾಗದಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ. ನಿಗದಿತ ದಿನಾಂಕ, ಸಮಯ, ಹುದ್ದೆ ವಿವರ ಹಾಗೂ ಆದ್ಯತಾ ಪಟ್ಟಿಯ ಕ್ರಮ ಸಂಖ್ಯೆಗೆ ಅನುಗುಣವಾಗಿ ಅರ್ಹ ಶಿಕ್ಷಕರು ಸೂಚಿಸಿದ ದಿನಾಂಕದಂದು ಕೌನ್ಸೆಲಿಂಗ್‌ಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ಈಗಾಗಲೇ ಆದ್ಯತಾ ಪಟ್ಟಿಗಳನ್ನು ವೃಂದವಾರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಸಲ್ಲಿಸಲಾಗಿದೆ. ಪಟ್ಟಿಯಲ್ಲಿರುವ ಶಿಕ್ಷಕರು ತಮ್ಮ ಕ್ರಮ ಸಂಖ್ಯೆಯ ದಿನದಂದು ಬೆಳಿಗ್ಗೆ 9.-30ಕ್ಕೆ ಕೌನ್ಸೆಲಿಂಗ್‌ಗೆ ಹಾಜರಾಗಬೇಕು. ತಡವಾಗಿ ಬಂದು ಕ್ರಮಸಂಖ್ಯೆ ಮುಂದೆ ಹೋಗಿದ್ದರೆ ಆನ್‌ಲೈನ್‌ ಕೌನ್ಸೆಲಿಂಗ್‌ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಪಟ್ಟಿಯಲ್ಲಿರುವ ಶಿಕ್ಷಕರು ಮಾತ್ರ ಕೌನ್ಸೆಲಿಂಗ್‌ಗೆ ಸಾಂದರ್ಭಿಕ ರಜೆ ಪಡೆದು ಹಾಜರಾಗಬೇಕು. ಯಾವುದೇ ಕಾರಣಕ್ಕೂ ಅನ್ಯ ಕಾರ್ಯ ನಿಮಿತ್ತ (ಒಒಡಿ) ಎಂದು ಪರಿಗಣಿಸುವುದಿಲ್ಲ. ಹಾಜರಾಗಬೇಕಿರುವ ಕ್ರಮ ಸಂಖ್ಯೆಗಳು ಕೇವಲ ಸೂಚಿತವಾಗಿದ್ದು, ಕೌನ್ಸೆಲಿಂಗ್‌ ವೇಳೆ ತಾಂತ್ರಿಕ ಸಮಸ್ಯೆಯಾದರೆ (ಸರ್ವರ್) ಪ್ರತಿ ದಿನಕ್ಕೆ ನಿಲ್ಲಿಸಿದ ಕ್ರಮ ಸಂಖ್ಯೆಯಿಂದ ಮುಂದಿನ ದಿನ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಸಾರಾಂಶ

2020–21ನೇ ಸಾಲಿನ ಅಂತರ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ಅಥವಾ ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ ಜ.24ರಿಂದ ಫೆ.3ರವರೆಗೆ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ರೇವಣ ಸಿದ್ದಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.