ತಲಕಾವೇರಿ (ಮಡಿಕೇರಿ): ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಕ್ಷೇತ್ರವು ಸಜ್ಜಾಗಿದ್ದು, ಇಂದು ಮಧ್ಯಾಹ್ನ 1.11ಕ್ಕೆ ಕಾವೇರಿ ತೀರ್ಥರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಿದೆ. ಕಾವೇರಿ ಮಾತೆ ಚಿನ್ನಾಭರಣದೊಂದಿಗೆ ಕಂಗೊಳಿಸುತ್ತಿದ್ದಾಳೆ. ಹೂವಿನ ಅಲಂಕಾರವು ಆಕರ್ಷಕವಾಗಿದೆ.
ಪ್ರಧಾನ ಅರ್ಚಕರು ಪೂಜಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾಗಮಂಡಲದಿಂದ ಕೊಡವ ಯೂತ್ ವಿಂಗ್ ಸದಸ್ಯರು ಪಾದಯಾತ್ರೆಯಲ್ಲಿ ತಲಕಾವೇರಿಗೆ ಆಗಮಿಸುತ್ತಿದ್ದಾರೆ. ಈ ವರ್ಷ ಮಧ್ಯಾಹ್ನ ತೀರ್ಥೋದ್ಭವ ನಡೆಯುತ್ತಿದ್ದು, ಸ್ಥಳೀಯ ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಭಾಗಮಂಡಲದಲ್ಲಿ ಪಿಂಡ ಪ್ರದಾನ ಹಾಗೂ ಪುಣ್ಯಸ್ನಾನ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬಂದೋಬಸ್ತ್ ಕೈಗೊಳ್ಳಲಾಗಿದೆ.
ತಲಕಾವೇರಿ ಭಾಗದಲ್ಲಿ ಮಳೆಯಾಗುತ್ತಿದ್ದು ಭಕ್ತರ ಸಂಭ್ರಮಕ್ಕೆ ಅಡಚಣೆ ಉಂಟಾಗಿದೆ.
ತಲಕಾವೇರಿ (ಮಡಿಕೇರಿ): ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಕ್ಷೇತ್ರವು ಸಜ್ಜಾಗಿದ್ದು, ಇಂದು ಮಧ್ಯಾಹ್ನ 1.11ಕ್ಕೆ ಕಾವೇರಿ ತೀರ್ಥರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಿದೆ. ಕಾವೇರಿ ಮಾತೆ ಚಿನ್ನಾಭರಣದೊಂದಿಗೆ ಕಂಗೊಳಿಸುತ್ತಿದ್ದಾಳೆ. ಹೂವಿನ ಅಲಂಕಾರವು ಆಕರ್ಷಕವಾಗಿದೆ. ಪ್ರಧಾನ ಅರ್ಚಕರು ಪೂಜಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾಗಮಂಡಲದಿಂದ ಕೊಡವ ಯೂತ್ ವಿಂಗ್ ಸದಸ್ಯರು ಪಾದಯಾತ್ರೆಯಲ್ಲಿ ತಲಕಾವೇರಿಗೆ ಆಗಮಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.