ADVERTISEMENT

ಗಡಿಕೇಶ್ವಾರ: ಮತ್ತೆ ಭೂಕಂಪನದ ಸದ್ದು, ಮುಂದುವರೆದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 7:45 IST
Last Updated 16 ಅಕ್ಟೋಬರ್ 2021, 7:45 IST
ಚಿಂಚೋಳಿ ತಾಲ್ಲೂಕು ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ಸುಣ್ಣದ ಕಲ್ಲು ಹಾಗೂ ಮಣ್ಣಿನಿಂದ ಮನೆಗಳು
ಚಿಂಚೋಳಿ ತಾಲ್ಲೂಕು ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ಸುಣ್ಣದ ಕಲ್ಲು ಹಾಗೂ ಮಣ್ಣಿನಿಂದ ಮನೆಗಳು   

ಚಿಂಚೋಳಿ: ತಾಲ್ಲೂಕಿನ ಭೂಕಂಪನ‌ ಪೀಡಿತ ಗಡಿಕೇಶ್ವಾರದಲ್ಲಿ‌ ಶನಿವಾರ ಬೆಳಿಗ್ಗೆ 11.20ಕ್ಕೆ ಭೂಮಿಯಿಂದ ಜೋರು ಸದ್ದು‌ ಕೇಳಿ ಬಂದಿದೆ ಎಂದು ಗ್ರಾಮದ ಯುವ ಮುಖಂಡ ವೀರೇಶ ಬೆಳಕೇರಿ ತಿಳಿಸಿದ್ದಾರೆ.

ಗ್ರಾಮದಲ್ಲಿ‌ ನಿರಂತರ ಭೂಕಂಪನ ಹಾಗೂ ಭೂಮಿಯಿಂದ ಸದ್ದು ಕೇಳಿ ಬರುತ್ತಿದ್ದು ಇವುಗಳು ಭೂಕಂಪದ ಪೂರ್ವ ಕಂಪನಗಳೆ ಅಥವಾ ಲಘು ಕಂಪನ ಎಂಬುದು ಪತ್ತೆ ಹಚ್ಚಲು ವಿಜ್ಞಾನಿಗಳು ಅಧ್ಯಯನ‌ ನಡೆಸುತ್ತಿದ್ದಾರೆ. ಶನಿವಾರ ಹೈದರಾಬಾದ್‌ನ ರಾಷ್ಟ್ರೀಯ ಭೂಭೌತವಿಜ್ಞಾನ ಸಂಸ್ಥೆಯ ವಿಜ್ಞಾನಿ ಸುರೇಶ ಗುಂಡಪತಿ ಬರುತ್ತಿದ್ದಾರೆ. ಭಾನುವಾರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳಾದ ಡಾ. ರಮೇಶ ದಿಕ್ಪಾಲ್, ಡಾ. ಅಭಿನಯ, ಸಂತೋಷಕುಮಾರ ಭೇಟಿ ನೀಡಿ ಅಧ್ಯಯನ ಮುಂದುವರೆಸುವರು ಎಂದು ತಹಶೀಲ್ದಾರ್‌ ಅಂಜುಮ್ ತಬಸ್ಸುಮ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇಂದು ಸಂಜೆ (ಅಕ್ಟೋಬರ್ 16) ಸಂಸದ ಡಾ. ಉಮೇಶ ಜಾಧವ್, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಗಡಿಕೇಶ್ವಾರ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದು, ಗ್ರಾಮಸ್ಥರಿಗೆ ಧೈರ್ಯ ತುಂಬಲಿದ್ದಾರೆ.

ADVERTISEMENT
ಸಾರಾಂಶ

ಭೂಕಂಪನ‌ ಪೀಡಿತ ಗಡಿಕೇಶ್ವಾರದಲ್ಲಿ‌ ಶನಿವಾರ ಬೆಳಿಗ್ಗೆ 11.20ಕ್ಕೆ ಭೂಮಿಯಿಂದ ಜೋರು ಸದ್ದು‌ ಕೇಳಿ ಬಂದಿದೆ ಎಂದು ಗ್ರಾಮದ ಯುವ ಮುಖಂಡ ವೀರೇಶ ಬೆಳಕೇರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.