ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಗಡಿಕೇಶ್ವಾರ ಸುತ್ತಲಿನ ಗ್ರಾಮಗಳಲ್ಲಿ ಮತ್ತೆ ಭೂಕಂಪನ ಸಂಭವಿದೆ. ಇದರಿಂದ ಮನೆಯಲ್ಲಿ ಬಾಂಡೆ ಸಾಮಾನುಗಳು, ಗೋಡೆಗೆ ಹಾಕಿದ್ದ ಗಡಿಯಾರ ಮತ್ತು ಮನೆಯ ಮಾಳಿಗೆಯಿಂದ ಕಸ ಕಡ್ಡಿ ದೂಳು ಕೆಳಕ್ಕೆ ಬಿದ್ದಿವೆ.
ಬೆಳಿಗ್ಗೆ 6.05 ನಿಮಿಷಕ್ಕೆ ಭೂಮಿಯಿಂದ ಜೋರು ಸದ್ದು ಕೇಳಿ ಬಂದಿದ್ದಲ್ಲದೇ ಭೂಮಿ ನಡುಗಿದ ಅನುಭವವಾಯಿತು ಎಂದು ಗಡಿಕೇಶ್ವಾರ ಗ್ರಾಮದ ಸಂತೋಷಕುಮಾರ ಬಳೇರ್ (ಬಳಿ) 'ಪ್ರಜಾವಾಣಿ'ಗೆ ತಿಳಿಸಿದರು. ಭೂಕಂಪದ ಭೀತಿಯಲ್ಲಿಯೇ ಜನ ಜೀವನ ನಡೆಸುತ್ತಿದ್ದು ಭೂಮಿ ಕಂಪಿಸಿದಾಗ ಮನೆಯಿಂದ ಹೊರ ಬಂದರು.
ಇಲ್ಲಿ ಶನಿವಾರ ಬೆಳಿಗ್ಗೆ 5.37ಕ್ಕೆ 3.2 ತೀವ್ರತೆ ಶುಕ್ರವಾರ ಮಧ್ಯರಾತ್ರಿ 12.44ಕ್ಕೆ 2.6 ತೀವ್ರತೆಯ ಭಾನುವಾರ ಬೆಳಿಗ್ಗೆ 6.05ಕ್ಕೆ ಮತ್ತೆ ಭೂಕಂಪನ ಸಂಭವಿಸಿದೆ. ದಾಖಲಾಗಿತ್ತು. ಮೂರು ದಿನಗಳಿಂದ ನಿರಂತರ ಭೂಕಂಪನ ಜತೆಗೆ ಭೂಮಿಯಿಂದ ಸದ್ದು ಕೇಳಿ ಬರುತ್ತಿದೆ. ಇದು ಜನರನ್ನು ಬೆಚ್ಚಿಬೀಳಿಸಿದೆ.
ಗಡಿಕೇಶ್ವಾರ, ಕುಪನೂರ, ಹಲಚೇರಾ, ತೇಗಲತಿಪ್ಪಿ, ಭಂಟನಳ್ಳಿ, ಬೆನಕಳ್ಳಿ, ರಾಯಕೋಡ, ಭೂತಪೂರ, ಚಿಂತಪಳ್ಳಿ, ರುದ್ನೂರು, ಹೊಸಳ್ಳಿ ಎಚ್ ಮೊದಲಾದ ಕಡೆ ಭೂಮಿಯು ನಡುಗಿದ ಅನುಭವವಾಗಿದೆ ಎಂದು ಹೊಸಳ್ಳಿ (ಎಚ್) ಗ್ರಾಮದ ವಿಜಯಕುಮಾರ ಚೇಂಗಟಿ ತಿಳಿಸಿದರು.
ಗಡಿಕೇಶ್ವಾರ ಸುತ್ತಲಿನ ಗ್ರಾಮಗಳಲ್ಲಿ ಮತ್ತೆ ಭೂಕಂಪನ ಸಂಭವಿದೆ. ಇದರಿಂದ ಮನೆಯಲ್ಲಿ ಬಾಂಡೆ ಸಾಮಾನುಗಳು, ಗೋಡೆಗೆ ಹಾಕಿದ್ದ ಗಡಿಯಾರ ಮತ್ತು ಮನೆಯ ಮಾಳಿಗೆಯಿಂದ ಕಸ ಕಡ್ಡಿ ದೂಳು ಕೆಳಕ್ಕೆ ಬಿದ್ದಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.