ಹಾವೇರಿ: ನಗರದ ನೇತಾಜಿ ನಗರದಲ್ಲಿರುವ ರವಿ ಮುಷ್ಠಿ ಅವರ 2 ಗುಂಟೆ ಖುಲ್ಲಾ ಜಾಗದಲ್ಲಿ ಮನೆ ಕಟ್ಟುವ ಸಲುವಾಗಿ ಸ್ವಚ್ಛತಾ ಕಾರ್ಯ ಮಾಡುವ ಸಂದರ್ಭ ಗುರುವಾರ ಅನುಮಾನಾಸ್ಪದ ‘ಹ್ಯಾಂಡ್ ಗ್ರೆನೇಡ್’ ತರಹದ ವಸ್ತು ಸಿಕ್ಕಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಶ್ವಾನ ಸಿಬ್ಬಂದಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಜನರು ಹೋಗದಂತೆ ನಿರ್ಬಂಧ ವಿಧಿಸಲಾಯಿತು.
‘ದಾವಣಗೆರೆ ಅಥವಾ ಬೆಂಗಳೂರಿನಿಂದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಶುಕ್ರವಾರ ಆಗಮಿಸಲಿದ್ದು, ಹ್ಯಾಂಡ್ ಗ್ರೆನೇಡ್ ತರಹದ ವಸ್ತುವನ್ನು ಪರೀಕ್ಷಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ನಗರದ ನೇತಾಜಿ ನಗರದಲ್ಲಿರುವ ರವಿ ಮುಷ್ಠಿ ಅವರ 2 ಗುಂಟೆ ಖುಲ್ಲಾ ಜಾಗದಲ್ಲಿ ಮನೆ ಕಟ್ಟುವ ಸಲುವಾಗಿ ಸ್ವಚ್ಛತಾ ಕಾರ್ಯ ಮಾಡುವ ಸಂದರ್ಭ ಗುರುವಾರ ಅನುಮಾನಾಸ್ಪದ ‘ಹ್ಯಾಂಡ್ ಗ್ರೆನೇಡ್’ ತರಹದ ವಸ್ತು ಸಿಕ್ಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.