ADVERTISEMENT

ಹಾವೇರಿ: ಒಂದೇ ದಿನ 143 ಕೋವಿಡ್‌ ಪ್ರಕರಣ

ಕೋವಿಡ್‌ ಮೂರನೇ ಅಲೆ: ಜಿಲ್ಲೆಯಲ್ಲಿ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 15:08 IST
Last Updated 21 ಜನವರಿ 2022, 15:08 IST
ಕೊರೊನಾ ವೈರಸ್‌ 
ಕೊರೊನಾ ವೈರಸ್‌    

ಹಾವೇರಿ: ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ 143 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ತ್ರಿಶತಕದ (310) ಗಡಿ ದಾಟಿದೆ. 

ಬ್ಯಾಡಗಿ 14, ಹಾನಗಲ್‌ 14, ಹಾವೇರಿ 35, ಹಿರೇಕೆರೂರು 25, ರಾಣೆಬೆನ್ನೂರು 19, ಸವಣೂರು 24 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 12 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್‌ ಶೇ 2.0 ಇದೆ. 

ಎರಡು ತಿಂಗಳಿನಿಂದ ಯಾವುದೇ ಕೋವಿಡ್‌ ಸಾವುಗಳು ಜಿಲ್ಲೆಯಲ್ಲಿ ಸಂಭವಿಸಿರಲಿಲ್ಲ. ಸವಣೂರ ತಾಲ್ಲೂಕಿನ 72 ವರ್ಷದ ಪುರುಷ ಮತ್ತು 70 ವರ್ಷದ ಮಹಿಳೆ ಇಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ. 3ನೇ ಅಲೆ ಕಾಲಿಟ್ಟ ನಂತರ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಕೋವಿಡ್‌ ಸಾವುಗಳಾಗಿವೆ. ಇವರಿಬ್ಬರಿಗೂ ಇತರ ಅನಾರೋಗ್ಯ ಸಮಸ್ಯೆಗಳು ಇದ್ದವು ಎಂದು ವೈದ್ಯರು ತಿಳಿಸಿದ್ದಾರೆ. 

ADVERTISEMENT

ಜಿಲ್ಲೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯ 6 ಕರ್ತವ್ಯನಿರತ ಕೊರೊನಾ ವಾರಿಯರ್‌ಗಳಿಗೆ ಸೋಂಕು ದೃಢಪಟ್ಟಿದೆ. 65 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 652 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 

****

ಕೋವಿಡ್‌ ಅಂಕಿಅಂಶ

ಜಿಲ್ಲೆಯಲ್ಲಿ ಒಟ್ಟು - 22,694

ಸಕ್ರಿಯ ಪ್ರಕರಣ - 310

ಗುಣಮುಖ - 21,732

ಸಾವು - 652

*

ದಿನದ ಏರಿಕೆ

ಹೊಸ ಪ್ರಕರಣ - 143

ಗುಣಮುಖ - 65

ಸಾವು - 02

ಸಾರಾಂಶ

ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ 143 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ತ್ರಿಶತಕದ (310) ಗಡಿ ದಾಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.