ADVERTISEMENT

ಹಾರೋಬೆಳವಡಿ: ರೈತರ ಸಂತೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:20 IST
Last Updated 17 ಜನವರಿ 2022, 16:20 IST
ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ವಾರದ ಸಂತೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ತಳವಾರ ಹಾಗೂ ಉಪಾಧ್ಯಕ್ಷ ವೀರೇಶ ಕನಾಜಿ ಚಾಲನೆ ನೀಡಿದರು
ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ವಾರದ ಸಂತೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ತಳವಾರ ಹಾಗೂ ಉಪಾಧ್ಯಕ್ಷ ವೀರೇಶ ಕನಾಜಿ ಚಾಲನೆ ನೀಡಿದರು   

ಧಾರವಾಡ: ತಾಲ್ಲೂಕಿನ ಹಾರೋಬೆಳವಡಿ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ರೈತರ ಸಂತೆಗೆ ಸೋಮವಾರ ಚಾಲನೆ ದೊರೆಯಿತು.

ಗ್ರಾಮ ಪಂಚಾಯ್ತಿ ಹಾಗೂ ವೀರಭದ್ರೇಶ್ವರ ರೈತ ಉತ್ಪಾದಕರ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಸಂತೆ ಆರಂಭಗೊಂಡಿತು. 

ಹಾರೋಬೆಳವಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ತಳವಾರ ಹಾಗೂ ಉಪಾಧ್ಯಕ್ಷ ವೀರೇಶ ಕನಾಜಿ ಅವರು ಜಂಟಿಯಾಗಿ ಬೆಲ್ಲವನ್ನು ಖರೀದಿಸುವ ಮೂಲಕ ವಾರದ ಸಂತೆಗೆ ಚಾಲನೆ ನೀಡಿದರು.

ADVERTISEMENT

ಹಾರೋಬೆಳವಡಿ ಹಾಗೂ ಸಮೀಪದ ಗ್ರಾಮಗಳ ರೈತರು ಉತ್ಸಾಹದಿಂದ ಪಾಲ್ಗೊಂಡರು. ಜೋಳ, ಗೋಧಿ ಸೇರಿದಂತೆ ಎಲ್ಲ ರೀತಿಯ ಅಕ್ಕಡಿ ಕಾಳುಗಳು, ವಿವಿಧ ಬಗೆಯ ಹೂವು, ಹಣ್ಣು, ತರಕಾರಿಗಳು, ಚುರಮರಿ ಮುಂತಾದವು ಲಭ್ಯವಿದ್ದವು.

ಹಾರೋಬೆಳವಡಿ ಗ್ರಾಮ ಪಂಚಾಯ್ತಿ ಸದಸ್ಯರ ಜತೆಗೆ ಕಿತ್ತೂರು ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಕಿನ ಇನಾಂಹೊಂಗಲ ಶಾಖೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ, ಗ್ರಾಮದ ವಿವಿಧ ಗಣ್ಯರಾದ ಸಂತೋಷಗೌಡ ಪಾಟೀಲ, ಈರಣ್ಣ ಗಾಣಿಗೇರ, ರಾಮಪ್ಪ ಕನಾಜಿ, ಯಲ್ಲಪ್ಪ ಉದಮೀಸಿ, ಫಕ್ಕೀರಪ್ಪ ಪರ್ವತಿ, ರುದ್ರಪ್ಪ ಕನಾಜಿ, ಪಿ.ಡಿ.ಒ. ಎನ್.ಎಫ್. ಮಾಳಣ್ಣವರ ಇದ್ದರು.

ಸಾರಾಂಶ

ತಾಲ್ಲೂಕಿನ ಹಾರೋಬೆಳವಡಿ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ರೈತರ ಸಂತೆಗೆ ಸೋಮವಾರ ಚಾಲನೆ ದೊರೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.