ಚಿಕ್ಕಮಗಳೂರು: ‘ಎಚ್.ಡಿ. ಕುಮಾರಸ್ವಾಮಿ ಅವರು ರಾಮ ಮಂದಿರಕ್ಕೆ ಎಷ್ಟು ಹಣ ಕೊಟ್ಟಿದ್ದೇನೆ ಎಂದು ಮೊದಲು ತಿಳಿಸಿ, ನಂತರ ಲೆಕ್ಕ ಕೇಳಲಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಚ್‌ಡಿಕೆ ಅವರ ಮಾತು ‘ತಾನು ಕಳ್ಳ ಪರರ ನಂಬ’ ಗಾದೆ ನೆನಪಿಸುವಂತಿದೆ. ರಾಮ ಮಂದಿರ ಚಳವಳಿಯಲ್ಲಿ ಅವರ ಪಾತ್ರ ಏನು? ರಾಮಜ್ಯೋತಿ ಯಾತ್ರೆ, ಇಟ್ಟಿಗೆ ಪೂಜೆ, ಶಿಲಾ ಪೂಜೆ, ಹೋರಾಟ, ಕರ ಸೇವೆಯಲ್ಲಿ ಅವರು ಪಾಲ್ಗೊಂಡಿದ್ರಾ?’ ಎಂದು ಪ್ರಶ್ನಿಸಿದರು.
ರಾಮ ಮಂದಿರಕ್ಕೆ ಹಣ ಕೊಟ್ಟವರು ಲೆಕ್ಕ ಕೇಳಲು ಅಧಿಕಾರ ಇದೆ. ಚಳವಳಿಯಲ್ಲಿ ಪಾತ್ರ ಇದ್ದವರಿಗೆ ಹಕ್ಕು ಇದೆ. ಹಣ ದುರುಪಯೋಗ ಮಾಡಿಕೊಳ್ಳಲು ಅಲ್ಲಿ ‘ಫ್ಯಾಮಿಲಿ ಖಾಂದಾನ್’ ಇಲ್ಲ. ಅಲ್ಲಿ ಇರುವವರೆಲ್ಲ ಸಮಾಜಕ್ಕಾಗಿ ಕೊಡುವವರು’ ಎಂದು ಉತ್ತರಿಸಿದರು.
‘ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ, ಉದ್ದೇಶ ಇಲ್ಲ. ಅಯೋಧ್ಯೆ ಹೋರಾಟ ಮಾಡುವಾಗ ಅವರು ನಮ್ಮ ಬೆಂಬಲಕ್ಕೆ ನಿಂತಿದ್ರಾ? ರಾಮ ಮಂದಿರ ಕಟ್ಟುತ್ತೇವೆ ಎಂದು ನಾವು ಹೇಳುವಾಗ ಅವರು ಮಸೀದಿ ಜಪ ಮಾಡುತ್ತಿದ್ದರು’ ಎಂದು ಕುಟುಕಿದರು.
‘ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ, ಉದ್ದೇಶ ಇಲ್ಲ. ಅಯೋಧ್ಯೆ ಹೋರಾಟ ಮಾಡುವಾಗ ಅವರು ನಮ್ಮ ಬೆಂಬಲಕ್ಕೆ ನಿಂತಿದ್ರಾ? ರಾಮ ಮಂದಿರ ಕಟ್ಟುತ್ತೇವೆ ಎಂದು ನಾವು ಹೇಳುವಾಗ ಅವರು ಮಸೀದಿ ಜಪ ಮಾಡುತ್ತಿದ್ದರು’ ಎಂದು ಕುಟುಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.