ADVERTISEMENT

ಆರ್‌ಎಸ್‌ಎಸ್‌ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಎಚ್‌ಡಿಕೆ ಮಾಡಿಲ್ಲ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 12:25 IST
Last Updated 16 ಅಕ್ಟೋಬರ್ 2021, 12:25 IST
   
ಚಿಕ್ಕಮಗಳೂರು: ‘ಎಚ್.ಡಿ.ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ ಏನು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಯಾವುದೊ ಪುಸ್ತಕ ಓದಿ ತಿಳಿದುಕೊಂಡೆ ಎಂದು ಹೇಳಿದ್ದಾರೆ, ಒಬ್ಬೊಬ್ಬರು ಒಂದೊಂದು ರೀತಿ ಅರ್ಥೈಸಿ ಪುಸ್ತಕ ಬರೆಯುತ್ತಾರೆ’ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕುಟುಕಿದರು. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ‘ಸ್ವಯಂ ಸೇವಕ ಆದಾಗ ಮಾತ್ರ ಆರ್‌ಎಸ್‌ಎಸ್‌ ಏನು ಎಂದು ಅರ್ಥವಾಗುತ್ತದೆ. ಆರ್‌ಎಸ್ಎಸ್‌ನಲ್ಲಿ ಸದಸ್ಯತ್ವ ಇಲ್ಲ, ಅಲ್ಲಿರುವುದು ಸ್ವಯಂ ಸೇವಕತ್ವ. ಈ ಸ್ವಯಂ ಸೇವಕತ್ವಕ್ಕೆ ಸದಸ್ಯತ್ವ, ನವೀಕರಣ, ಮಾಸಿಕ ಶುಲ್ಕ ಇಲ್ಲ. ಆರ್‌ಎಸ್‌ಎಸ್‌ ಸದಸ್ಯರಾದವರು ಸಿಂಡಿಕೇಟ್‌ನಲ್ಲಿ ಇದ್ದಾರೆ ಎಂದು ಅವರು ಹೇಳಿರುವುದೇ ಅಜ್ಞಾನ ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದರು.

ಸಾರಾಂಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.