ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಮೃದ್ಧವಾಗಿ ಮಳೆ ಸುರಿಯುತ್ತಿದೆ. ಕೆರೆ ಕಟ್ಟೆಗಳು ಭರ್ತಿ ಆಗುತ್ತಿವೆ. ಅಂತರ್ಜಲ ಉತ್ತಮಗೊಳ್ಳುತ್ತಿದೆ. ಈ ಸಮೃದ್ಧ ಮಳೆಗಾಲದಲ್ಲಿಯೂ ಜಿಲ್ಲೆಯ 43 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ!
ಟ್ಯಾಂಕರ್ ಮೂಲಕ ನಾಲ್ಕು ಹಾಗೂ ಉಳಿದ 39 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚುತ್ತಿದೆ. ಸಮೃದ್ಧವಾಗುತ್ತಿದೆ ಎನ್ನುವ ನಡುವೆಯೂ ಹೀಗೆ ನೀರಿನ ಸಮಸ್ಯೆಗಳು ಹಳ್ಳಿಗಳಲ್ಲಿ ಎದುರಾಗಿದೆ.
ಅದರಲ್ಲಿಯೂ ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಪ್ರಮುಖವಾಗಿದೆ. ಬಾಗೇಪಲ್ಲಿ, ಗುಡಿಬಂಡೆ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲಿ ಹೆಚ್ಚಿನ ಸಮಸ್ಯೆಗಳು ಇಲ್ಲ.
ಸಮಸ್ಯಾತ್ಮಕ ಗ್ರಾಮಗಳು ಇವು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀರಿನ ಸಮಸ್ಯಾತ್ಮಕ ಗ್ರಾಮಗಳು ಎಂದು ಪಟ್ಟಿ ಮಾಡಿದೆ. ಆ ಗ್ರಾಮಗಳು ಇಂತಿವೆ.
ಚಿಂತಾಮಣಿ ತಾಲ್ಲೂಕಿನ ವಿಶ್ವನಾಥಪುರ, ದ್ವಾರಪಲ್ಲಿ, ನಿಮ್ಮಕಾಯಕಲಹಳ್ಳಿ, ನರಸಾಪುರ, ಕೆಂದನಹಳ್ಳಿ, ವಿರೂಪಾಕ್ಷಪುರ, ಕೊಡದವಾಡಿ, ಮರಿನಾಯಕನಹಳ್ಳಿ, ಜಿ.ಭತ್ತಲಹಳ್ಳಿ, ಶೆಟ್ಟಿಹಳ್ಳಿ, ಸಿದ್ದೀಮಠ, ಅಗ್ರಹಾರ ಮತ್ತು ಚಿಂತಪಲ್ಲಿ.
ಬಾಗೇಪಲ್ಲಿ ತಾಲ್ಲೂಕಿನ ಸಿದ್ದನಪಲ್ಲಿ, ಸಿಂಗನಕುದುರೆ.
ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿ, ಮಿತ್ತನಹಳ್ಳಿ, ಜಂಗಮಕೋಟೆ, ಕಾಮನಹಳ್ಳಿ, ವಲ್ಲಪ್ಪನಹಳ್ಳಿ, ಅಲಗುರ್ಕಿ, ಎಲ್.ಎನ್.ಹೊಸೂರು, ಬೆಳ್ಳೂಟಿ, ಕನ್ನಮಂಗಲ, ಸೊರೆಕಾಯಲಹಳ್ಳಿ, ಕಲ್ಯಾಪುರ, ಸುಂಡ್ರಹಳ್ಳಿ, ಯಣ್ಣಂಗೂರು, ಘಟ್ಟಮಾರನಹಳ್ಳಿ, ತಲಕಾಯಲಬೆಟ್ಟ, ಬೈರಸಂದ್ರ, ಹಿರೇಬಲ್ಲ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಗುವ್ವಲಕಾನಹಳ್ಳಿ, ಅಂಗಟ್ಟ, ಗುಡಿಹಳ್ಳಿ, ಸುಜ್ಞಾನಸಾಗರ, ಲಕ್ಷ್ಮಿಪತಿಹಳ್ಳಿ, ಬೊಮ್ಮನಹಳ್ಳಿ, ರಾಮಗಾನಪರ್ತಿ, ಸೊಪ್ಪಹಳ್ಳಿ, ಜಾತವಾರ, ಹೊಸಹಳ್ಳಿ, ಕವರ್ನಹಳ್ಳಿ, ಕೊಂಡೇನಹಳ್ಳಿ. ಈ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ಮತ್ತು ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯನ್ನು ಹೊಂದಿರುವ ಗ್ರಾಮಗಳು ಹೆಚ್ಚಿವೆ.
ಪ್ರತಿವಾರವೂ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮಗಳ ಪಟ್ಟಿ ತಯಾರಿಸಲಾಗುತ್ತಿದೆ. ಸಂಖ್ಯೆ ಹೆಚ್ಚುತ್ತಿದೆ. ರೈತರ ಖಾಸಗಿ ಕೊಳವೆಬಾವಿಗಳನ್ನು ನೀರು ಪಡೆದು ನೀಡಲಾಗುತ್ತಿದೆ. ಟ್ಯಾಂಕರ್‌ನಿಂದ ನೀರು ಪೂರೈಸುವ ಗ್ರಾಮಗಳ ಸಂಖ್ಯೆ ಕಡಿಮೆ ಇದೆ. ಬಹಳಷ್ಟು ಕಡೆಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಗಳು ತಿಳಿಸುತ್ತವೆ.
ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಈ ಹಿಂದೆ ಕೊರೆದಿದ್ದ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಸಹ ಹೆಚ್ಚತ್ತಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಬಹುದು. ಒಂದು ತಿಂಗಳ ನಂತರ ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಪರಿಹಾರ ಆಗಬಹುದು ಎನ್ನುವ ಆಶಾವಾದವನ್ನು ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಮೃದ್ಧವಾಗಿ ಮಳೆ ಸುರಿಯುತ್ತಿದೆ. ಕೆರೆ ಕಟ್ಟೆಗಳು ಭರ್ತಿ ಆಗುತ್ತಿವೆ. ಅಂತರ್ಜಲ ಉತ್ತಮಗೊಳ್ಳುತ್ತಿದೆ. ಈ ಸಮೃದ್ಧ ಮಳೆಗಾಲದಲ್ಲಿಯೂ ಜಿಲ್ಲೆಯ 43 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.