ADVERTISEMENT

12 ವರ್ಷದ ಹಿಂದಿನ ಹಳ್ಳಿ ಈಗಿಲ್ಲ!

ನಲ್ಲರಾಳ್ಳಹಳ್ಳಿ ಕ್ರಾಸ್: ಅಂಗನವಾಡಿ ಕಾರ್ಯಕರ್ತೆಗೆ ಬಡ್ತಿ ಸಮಸ್ಯೆ

ಡಿ.ಎಂ.ಕುರ್ಕೆ ಪ್ರಶಾಂತ
Published 18 ಜನವರಿ 2022, 5:19 IST
Last Updated 18 ಜನವರಿ 2022, 5:19 IST
12 ವರ್ಷಗಳ ಹಿಂದೆ ನಲ್ಲರಾಳ್ಳಹಳ್ಳಿ ಕ್ರಾಸ್‌ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೀಡಿದ್ದ ಆದೇಶ ಪತ್ರವನ್ನು ಪ್ರದರ್ಶಿಸುತ್ತಿರುವ ಪಾರ್ವತಮ್ಮ
12 ವರ್ಷಗಳ ಹಿಂದೆ ನಲ್ಲರಾಳ್ಳಹಳ್ಳಿ ಕ್ರಾಸ್‌ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೀಡಿದ್ದ ಆದೇಶ ಪತ್ರವನ್ನು ಪ್ರದರ್ಶಿಸುತ್ತಿರುವ ಪಾರ್ವತಮ್ಮ   

ಚಿಕ್ಕಬಳ್ಳಾಪುರ: 12 ವರ್ಷಗಳ ಹಿಂದೆ ಆ ಗ್ರಾಮದ ಮಿನಿ ಅಂಗನವಾಡಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆದೇಶ ಪಡೆದು ಪಾರ್ವತಮ್ಮ ಕಾರ್ಯಕರ್ತೆಯ ಕೆಲಸಕ್ಕೆ ಸೇರಿದ್ದರು. ಈಗ ಅವರಿಗೆ ಮುಖ್ಯವಾಹಿನಿಯ ಅಂಗನವಾಡಿ ಕಾರ್ಯಕರ್ತೆಯಾಗಿ ಬಡ್ತಿ ದೊರೆತಿದೆ. ಆದರೆ, ಅವರು 12 ವರ್ಷಗಳ ಕಾಲ ಕೆಲಸ ಮಾಡಿದ ಆ ಹಳ್ಳಿ ನಮ್ಮ ದಾಖಲೆಯಲ್ಲಿಯೇ ಇಲ್ಲ ಎನ್ನುತ್ತಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳು. 

ಬಡ್ತಿಗಾಗಿ ಕಾಯುತ್ತಿದ್ದ ಪಾರ್ವತಮ್ಮ ಈಗ ಆ ಹಳ್ಳಿಯ ದಾಖಲೆಗಾಗಿ ಕಂದಾಯ ಇಲಾಖೆಯ ಕಚೇರಿಗೆ ಅಲೆಯುತ್ತಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಹಳ್ಳಿ ಮಿನಿ ಅಂಗನವಾಡಿ ಕಾರ್ಯಕರ್ತೆಯಾಗಿ ಪಾರ್ವತಮ್ಮ ಕೆಲಸ ಮಾಡುತ್ತಿದ್ದಾರೆ. ಈಗ ಸಮೀಪದ ಗುಟ್ಟೂರಿಗೆ ಬಡ್ತಿ ಮೇಲೆ ವರ್ಗಾವಣೆ ಕೋರಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲಧಿಕಾರಿಗಳು ವಾಸಸ್ಥಳ ದೃಢೀಕರಣ ಪತ್ರ ತರುವಂತೆ ಹೇಳುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ನಲ್ಲರಾಳ್ಳಹಳ್ಳಿ ವಾಸ ಎಂದು ಪ್ರಮಾಣ ಪತ್ರ ನೀಡುವಂತೆ ಕೋರುತ್ತಿದ್ದಾರೆ. ಆದರೆ, ಅಧಿಕಾರಿಗಳು ಆ ಹೆಸರಿನ ಊರೇ ನಮ್ಮಲ್ಲಿ ಎನ್ನುತ್ತಿದ್ದಾರೆ.  

ADVERTISEMENT

ಸಮೀಪದ ಬೋಡನಮರಿ ಮತ್ತು ದನಮಿಟ್ಟೇನಹಳ್ಳಿಯ ಹೆಸರು ಕಂದಾಯ ಇಲಾಖೆಯಲ್ಲಿ ತೋರಿಸುತ್ತಿದೆ. ಈ ತಾಂತ್ರಿಕ ಸಮಸ್ಯೆ ಪರಿಹರಿಸಿ ತಮಗೆ ಬಡ್ತಿ ನೀಡುವಂತೆ ಹಲವು ದಿನಗಳಿಂದ ಕಂದಾಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಪಾವರ್ತಮ್ಮ ಎಡತಾಕುತ್ತಿದ್ದಾರೆ. ಈ ತಾಂತ್ರಿಕ ಸಮಸ್ಯೆಯ ಕಾರಣದಿಂದ ಅವರ ಬಡ್ತಿಗೂ ಸಮಸ್ಯೆಯಾಗಿದೆ.

‘ನನಗೆ ನ್ಯಾಯ ದೊರಕಿಸಿ ಕೊಡಬೇಕು. ನಲ್ಲರಾಳ್ಳಹಳ್ಳಿ ಕ್ರಾಸ್ ಎಂದೇ ನನಗೆ ಆದೇಶ ನೀಡಿದ್ದಾರೆ. ಈಗ ಆ ಹಳ್ಳಿ ಇಲ್ಲ ಎಂದರೆ ಏನು ಮಾಡುವುದು. ಈ ಕೆಲಸವನ್ನೇ ನಂಬಿ ಬದುಕುತ್ತಿದ್ದೇನೆ. ನಮ್ಮ ಇಲಾಖೆಯವರು ಸಮಸ್ಯೆ ಪರಿಹರಿಸಿ ಬಡ್ತಿ ನೀಡಬೇಕು’ ಎಂದು ಪಾರ್ವತಮ್ಮ ಹೇಳಿದರು.

ಸಾರಾಂಶ

12 ವರ್ಷಗಳ ಹಿಂದೆ ಆ ಗ್ರಾಮದ ಮಿನಿ ಅಂಗನವಾಡಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆದೇಶ ಪಡೆದು ಪಾರ್ವತಮ್ಮ ಕಾರ್ಯಕರ್ತೆಯ ಕೆಲಸಕ್ಕೆ ಸೇರಿದ್ದರು. ಈಗ ಅವರಿಗೆ ಮುಖ್ಯವಾಹಿನಿಯ ಅಂಗನವಾಡಿ ಕಾರ್ಯಕರ್ತೆಯಾಗಿ ಬಡ್ತಿ ದೊರೆತಿದೆ. ಆದರೆ, ಅವರು 12 ವರ್ಷಗಳ ಕಾಲ ಕೆಲಸ ಮಾಡಿದ ಆ ಹಳ್ಳಿ ನಮ್ಮ ದಾಖಲೆಯಲ್ಲಿಯೇ ಇಲ್ಲ ಎನ್ನುತ್ತಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.