ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ನವರಾತ್ರಿ ಹಬ್ಬದ ಸಡಗರ ಮನೆ ಮಾಡಿತ್ತು. ಗುರುವಾರ ಪ್ರತಿ ಮನೆಗಳಲ್ಲಿಯೂ ಕಾರು, ಬೈಕ್‌ಗಳನ್ನು ತೊಳೆದು ವಾಹನಗಳನ್ನು ಪೂಜಿಸಿದರು. ಶುಕ್ರವಾರ ಸಿಹಿ ಅಡುಗೆ ಮಾಡಿ ಸಂಭ್ರಮಿಸಿದರು. ಬಿಬಿ ರಸ್ತೆಯ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದೇ ಪೂಜೆಗಳು ಜರುಗಿದವು. ಭಕ್ತರು ಸಂಜೆಯವರೆಗೂ ಸಾಲಿಟ್ಟು ದೇವಿಯ
ದರ್ಶನ ಪಡೆದರು.
ಸಂಜೆ ಬಿಬಿ ರಸ್ತೆಯಲ್ಲಿ ಬೆಸ್ಕಾಂ ಸಿಬ್ಬಂದಿ ಚಾಮುಂಡೇಶ್ವರಿ ದೇವಿಯ ಮೂರ್ತಿಯ ಮೆರವಣಿಗೆ ಮಾಡಿದರು.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಶುಕ್ರವಾರ ನಡೆದ ಪೂಜೆಯಲ್ಲಿ ವಾಹನಗಳನ್ನು ಸಿಂಗರಿಸಲಾಗಿತ್ತು. ಕಚೇರಿ ಆವರಣದಲ್ಲಿ ತೋರಣಗಳನ್ನು ಕಟ್ಟಲಾಗಿತ್ತು. ನಗರಸಭೆ
ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಪೌರಾಯುಕ್ತ ಮಹಾಂತೇಶ್, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ನವರಾತ್ರಿ ಹಬ್ಬದ ಸಡಗರ ಮನೆ ಮಾಡಿತ್ತು. ಗುರುವಾರ ಪ್ರತಿ ಮನೆಗಳಲ್ಲಿಯೂ ಕಾರು, ಬೈಕ್‌ಗಳನ್ನು ತೊಳೆದು ವಾಹನಗಳನ್ನು ಪೂಜಿಸಿದರು. ಶುಕ್ರವಾರ ಸಿಹಿ ಅಡುಗೆ ಮಾಡಿ ಸಂಭ್ರಮಿಸಿದರು. ಬಿಬಿ ರಸ್ತೆಯ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದೇ ಪೂಜೆಗಳು ಜರುಗಿದವು. ಭಕ್ತರು ಸಂಜೆಯವರೆಗೂ ಸಾಲಿಟ್ಟು ದೇವಿಯ ದರ್ಶನ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.