ADVERTISEMENT

ಎಚ್ಚೆತ್ತ ಅಧಿಕಾರಶಾಹಿ ಸಂತೆ ನಿಯಮ ಪಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 5:14 IST
Last Updated 18 ಜನವರಿ 2022, 5:14 IST
ಗೌರಿಬಿದನೂರು ಹೊರವಲಯದಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿನ ಕುರಿ, ಮೇಕೆ ಸಂತೆ ವೈಜ್ಞಾನಿಕವಾಗಿ ನಡೆಯುತ್ತಿರುವುದು
ಗೌರಿಬಿದನೂರು ಹೊರವಲಯದಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿನ ಕುರಿ, ಮೇಕೆ ಸಂತೆ ವೈಜ್ಞಾನಿಕವಾಗಿ ನಡೆಯುತ್ತಿರುವುದು   

ಗೌರಿಬಿದನೂರು: ನಗರ ಹೊರವಲಯದಲ್ಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರತಿ ಭಾನುವಾರ ವಾರದ ಕುರಿ, ಮೇಕೆ ಸಂತೆಯು ಕೋವಿಡ್ ಮಾರ್ಗಸೂಚಿ ಪಾಲಿಸದೇ ನಡೆಯುತ್ತಿತ್ತು‌. ಇದಕ್ಕೆ‌ ಸಂಬಂಧಿಸಿದಂತೆ ಜ. 10ರಂದು ‘ಪ್ರಜಾವಾಣಿ’ಯಲ್ಲಿ ‘ಸರ್ಕಾರಿ‌ ನಿಯಮ ಸರಿ; ಬದುಕಿಗೆ ಯಾರು ಆಸರೆ?’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟ ವಾಗಿತ್ತು.

ಈ ಸುದ್ದಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿ ಗಳು, ಕುರಿ ಮತ್ತು ಉಣ್ಣೆ ಉತ್ಪಾದನಾ ಮತ್ತು ಮಾರುಕಟ್ಟೆ ಮಂಡಳಿಯ ನಿರ್ದೇಶಕರು ಹಾಗೂ ಸ್ಥಳೀಯ ಪೊಲೀಸರು ಎಚ್ವೆತ್ತುಕೊಂಡಿದ್ದಾರೆ. ಎಪಿಎಂಸಿ ಮಾರುಕಟ್ಟೆ ‌ಪ್ರಾಂಗಣದಲ್ಲಿ ಈ‌ ಹಿಂದೆ ನಿರ್ಮಾಣ ಮಾಡಲಾಗಿದ್ದ ಕುರಿ‌ ಮತ್ತು ಮೇಕೆ ಸಂತೆ ಪ್ರಾಂಗಣದಲ್ಲಿ ವೈಜ್ಞಾನಿಕ ವಿಧಾನದಲ್ಲಿ ಸಂತೆ ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ.

ಕುರಿ‌ ಮತ್ತು ಮೇಕೆಗಳನ್ನು ಪ್ರತ್ಯೇಕ ಬೋನಿನಲ್ಲಿರಿಸಿ ನಡುವಿನ ಅಂತರ ಕಾಪಾಡುವ ಜತೆಗೆ ಎಲ್ಲರೂ ಮಾಸ್ಕ್ ‌ಧರಿಸಿ ಶಿಸ್ತಿನಿಂದ ಸಂತೆಯ ವ್ಯಾಪಾರ ‌ವಹಿವಾಟು ನಡೆಸಿದ್ದಾರೆ.

ADVERTISEMENT

ರೈತ ಕುದುರೆಬ್ಯಾಲ್ಯ ಕೆ.ಸಿ. ರಾಮಲಿಂಗಪ್ಪ ಮಾತನಾಡಿ, ‘ಕಳೆದ ವಾರ ಕುರಿ ಮತ್ತು‌ ಮೇಕೆ ಸಂತೆ ಸುದ್ದಿ ಪ್ರಕಟವಾದ ಪರಿಣಾಮ ಈ‌ ವಾರದ ಸಂತೆಯು‌ ಅತ್ಯಂತ ವೈಜ್ಞಾನಿಕ ಮತ್ತು ಸರ್ಕಾರದ ಆದೇಶದ ಮೇರೆಗೆ ನಡೆಸಲು ಸಾಧ್ಯವಾಗಿದೆ. ಇದರಿಂದ ಗ್ರಾಮೀಣ ‌ಭಾಗದ ರೈತರು ಮತ್ತು ವ್ಯಾಪಾರಸ್ಥರಿಗೆ ಯಾವುದೇ ತೊಂದರೆಯಿಲ್ಲದೆ ಅಚ್ಚುಕಟ್ಟಾಗಿ ವಹಿವಾಟು ನಡೆಯುತ್ತಿದೆ. ರೈತರ ಹಿತದೃಷ್ಟಿಯಿಂದ ‌ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯು ಸಮಾಜಮುಖಿಯಾಗಿದೆ’ ಎಂದು ಹೇಳಿದರು.

ಸಾರಾಂಶ

ನಗರ ಹೊರವಲಯದಲ್ಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರತಿ ಭಾನುವಾರ ವಾರದ ಕುರಿ, ಮೇಕೆ ಸಂತೆಯು ಕೋವಿಡ್ ಮಾರ್ಗಸೂಚಿ ಪಾಲಿಸದೇ ನಡೆಯುತ್ತಿತ್ತು‌. ಇದಕ್ಕೆ‌ ಸಂಬಂಧಿಸಿದಂತೆ ಜ. 10ರಂದು ‘ಪ್ರಜಾವಾಣಿ’ಯಲ್ಲಿ ‘ಸರ್ಕಾರಿ‌ ನಿಯಮ ಸರಿ; ಬದುಕಿಗೆ ಯಾರು ಆಸರೆ?’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟ ವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.