ಪ್ರಜಾವಾಣಿ ವಾರ್ತೆ
ಕೊಳ್ಳೇಗಾಲ: ‘ಕ್ಷೇತ್ರದ ವ್ಯಾಪ್ತಿಯ ಅನೇಕ ಕೆರೆಗಳ ಒತ್ತುವರಿ ತೆರವು ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅವರಿಗೆ ಮನವಿ ಮಾಡಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು,‘ನಗರದ ಕೊಂಗಳ ಕೆರೆ, ಚಿಕ್ಕರಂಗನಾಥನ ಕೆರೆ, ಮುಡಿಗುಂಡ ಕೆರೆ ಹಾಗೂ ಹೊಂಗನೂರು ಹಿರೆಕೆರೆ ಕಾಮಗಾರಿಗಳು ಸರಿಯಾಗಿ ಒತ್ತುವರಿ ತೆರವು ಆಗಿಲ್ಲ, ಹಾಗಾಗಿ ಕಾಮಗಾರಿಯನ್ನು ತೆರವು ಮಾಡದೆ ಮಾಡುತ್ತಿದ್ದಾರೆ. ಕಾಮಗಾರಿಗಳಿಗೆ ಅನುದಾನ ಕೊರತೆ ಇದೆ. ಅನುದಾನ ಕೂಡಲೇ ಬಿಡುಗಡೆ ಮಾಡಿ’ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು ಮಾರ್ಚ್ ತಿಂಗಳಲ್ಲಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಬೇಗ ಮುಕ್ತಾಯ ಮಾಡಿ ಎಂದು ಉತ್ತರ ನೀಡಿದರು.
ನಂತರ ಮಾತನಾಡಿದ ಶಾಸಕರು,‘ಈ ಹಿಂದೆ 1994 ರಿಂದ 99 ಅವಧಿಯಲ್ಲಿ ಶಾಸಕನಾಗಿದ್ದಾಗ ಹೊಂಗನೂರು ಹಿರಿಕೆರೆ ಏತ ನೀರಾವರಿ ಮಂಜೂರು ಮಾಡಲಾಯಿತು. ಈ ಕೆರೆಯ ಅಭಿವೃದ್ಧಿಗೆ ಒಟ್ಟು ₹18 ಕೋಟಿ ಅವಶ್ಯಕತೆ ಇದೆ. ಈ ನೀರಾವರಿ ಪೂರ್ಣಗೊಂಡರೆ 737 ಹೆಕ್ಟೆರ್ ಜಮೀನುಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತದೆ’ ಎಂದರು.
ಇವರ ಪ್ರಶ್ನೆಗೆ ಉತ್ತರಿಸಿದ ಎಸ್.ಎನ್.ಬೋಸರಾಜು, ಹೊಂಗನೂರು ಕೆರೆಯ ಕ್ರಿಯಾಯೋಜನೆಯನ್ನು ತಯಾರಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.