ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದ ಬಳಿಯಿರುವ ಎತ್ತಿನಗುಡ್ಡವನ್ನು ವೃಕ್ಷವನವನ್ನಾಗಿ (ಟ್ರೀ ಪಾರ್ಕ್) ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಆರಂಭಿಕ ಹಂತದಲ್ಲಿ ₹60 ಲಕ್ಷ ಹಣವೂ ಮಂಜೂರಾಗಿದೆ.
ಮಲೆಮಹದೇಶ್ವರ ವನ್ಯಧಾಮವು ಈಗಾಗಲೇ ಕೊಳ್ಳೆಗಾಲದಲ್ಲಿ ಮರಗಡಿಗುಡ್ಡವನ್ನು ವೃಕ್ಷವನನ್ನಾಗಿ ರೂಪಿಸಿದೆ. ಈ ವನವು ನಗರದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಬ್ಬರಿಗೂ ಕನಿಷ್ಠ ಶುಲ್ಕ (₹2) ನಿಗದಿಪಡಿಸಿ ಗುಡ್ಡದಿಂದ ಕೊಳ್ಳೇಗಾಲದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದೆ (ಇತ್ತೀಚೆಗೆ ಜಿಪ್‌ಲೈನ್ ಸಾಹಸ ಕ್ರೀಡೆಯನ್ನೂ ಆರಂಭಿಸಿ ಯಶಸ್ಸುಗಳಿಸಿದೆ). ಈಗ ಇಂಥದ್ದೇ ಒಂದು ಪ್ರಯತ್ನವನ್ನು ಹನೂರಿನಲ್ಲೂ ಮಾಡಲು ಅದು ಮುಂದಾಗಿದೆ.
ಪಟ್ಟಣದಲ್ಲಿರುವ ಎತ್ತಿನಗುಡ್ಡವನ್ನು ವೃಕ್ಷ ವನವನ್ನಾಗಿ ಅಭಿವೃದ್ಧಿ ಪಡಿಸಲು ಅರಣ್ಯ ಅಧಿಕಾರಿಗಳು ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದರು. ಇಲಾಖೆಯ ಉನ್ನತ ಅಧಿಕಾರಿಗಳು ಅದಕ್ಕೆ ಸಮ್ಮತಿ ಸೂಚಿಸಿದ್ದು, ಮೊದಲ ಹಂತದಲ್ಲಿ ₹60 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ತಿಂಗಳ ಒಳಗೆ ಟೆಂಡರ್ ಕರೆದು ಉದ್ಯಾನ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಇಲಾಖೆ ಚಿಂತನೆ ನಡೆಸಿದೆ.
ಏನೇನಿರಲಿದೆ..?: ಎತ್ತಿನ ಗುಡ್ಡವು 25 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಜಾಗದಲ್ಲಿ ವಾಯುವಿಹಾರ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಹಲವು ಕೆಲಸಗಳನ್ನು ಮಾಡಲು ಮಾಸ್ಟರ್ ಪ್ಲಾನ್ ಅನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.
ಗುಡ್ಡದ ಸುತ್ತಲೂ ಬೇಲಿ ಹಾಕುವುದು, ಮುಖ್ಯ ದ್ವಾರ ನಿರ್ಮಾಣ, ಗಿಡಮೂಲಿಕೆಗಳ ತೋಟ ನಿರ್ಮಾಣ, ವಿಶ್ರಾಂತಿ ತಾಣಗಳ ನಿರ್ಮಾಣ, ಗುಡ್ಡ ಪೂರ್ತಿ ವಿವಿಧ ಜಾತಿಯ ಸಸಿಗಳನ್ನು ನೆಡುವುದು, ವಾಯು ವಿಹಾರಕ್ಕಾಗಿ ರಸ್ತೆ, ಯುವಕರಿಗಾಗಿ ತೆರೆದ ಜಿಮ್, ಮಕ್ಕಳ ಆಟದ ಮೈದಾನ, ವಿಶ್ರಾಂತಿ ಕುರ್ಚಿಗಳ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
‘ಪ್ರತಿ ತಾಲ್ಲೂಕು ಕೇಂದ್ರದಲ್ಲೂ ಸಾರ್ವಜನಿಕರ ಅನುಕೂಲಕ್ಕಾಗಿ ವೃಕ್ಷವನ ಇರಬೇಕು ಎಂಬುದು ಅರಣ್ಯ ಇಲಾಖೆ ಆಶಯ. ಅದರಂತೆ ಕೊಳ್ಳೇಗಾಲದಲ್ಲಿ ನಿರ್ಮಾಣ ಮಾಡಿರುವ ಮರಡಿಗುಡ್ಡ ವೃಕ್ಷವನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಲೆಮಹದೇಶ್ವರ ವನ್ಯಧಾಮದ ಅರಣ್ಯ ಪ್ರದೇಶ ಬಹುತೇಕ ಹನೂರು ತಾಲ್ಲೂಕಿಗೆ ಜಾಸ್ತಿ ಒಳಪಡುವುದರಿಂದ ಇಲ್ಲಿಯೂ ವೃಕ್ಷವನ ನಿರ್ಮಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ತಿಂಗಳೊಳಗೆ ಕೆಲಸವೂ ಆರಂಭವಾಗಲಿದೆ’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ವಿ.ಏಡುಕುಂಡಲು.
‘ಎತ್ತಿನಗುಡ್ಡ ಪಟ್ಟಣದ ಹೊರಗಿರುವುದರಿಂದ ವೃಕ್ಷವನ ನಿರ್ಮಿಸಿದರೆ ಪಟ್ಟಣದ ಸಾರ್ವಜನಿಕರು ಮಾತ್ರವಲ್ಲದೇ ಹೊರಗಡೆಯಿಂದ ಪಟ್ಟಕ್ಕೆ ಬರುವ ನಾಗರಿಕರಿಗೂ ಅನುಕೂಲವಾಗಲಿದೆ. ಸ್ಥಳಿಯರಿಗೆ ಕುಳಿತುಕೊಳ್ಳಲು, ವಾಯುವಿಹಾರ ಮಾಡಲು ಉತ್ತಮ ಸ್ಥಳವಾಗಿ ಹೊರಹೊಮ್ಮಲಿದೆ. ಶುದ್ಧ ಗಾಳಿಯ ಜೊತೆಗೆ ಆ ಗುಡ್ಡದ ಮೇಲೆ ನಿಂತು ಪಟ್ಟಣದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಜನರಿಗೆ ಸಿಗಲಿದೆ’ ಎಂದು ವಲಯ ಅರಣ್ಯಾಧಿಕಾರಿ ಸಯ್ಯಾದ್ ಸಾಬ್ ನದಾಫ್ ಅವರು ಹೇಳಿದರು.
ವೃಕ್ಷವನದಲ್ಲಿ ಏನೇನಿರಲಿದೆ..?
ಎತ್ತಿನ ಗುಡ್ಡವು 25 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಜಾಗದಲ್ಲಿ ವಾಯುವಿಹಾರ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಹಲವು ಕೆಲಸಗಳನ್ನು ಮಾಡಲು ಮಾಸ್ಟರ್ ಪ್ಲಾನ್ ಅನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.
ಗುಡ್ಡದ ಸುತ್ತಲೂ ಬೇಲಿ ಹಾಕುವುದು, ಮುಖ್ಯ ದ್ವಾರ ನಿರ್ಮಾಣ, ಗಿಡಮೂಲಿಕೆಗಳ ತೋಟ ನಿರ್ಮಾಣ, ವಿಶ್ರಾಂತಿ ತಾಣಗಳ ನಿರ್ಮಾಣ, ಗುಡ್ಡ ಪೂರ್ತಿ ವಿವಿಧ ಜಾತಿಯ ಸಸಿಗಳನ್ನು ನೆಡುವುದು, ವಾಯು ವಿಹಾರಕ್ಕಾಗಿ ರಸ್ತೆ, ಯುವಕರಿಗಾಗಿ ತೆರೆದ ಜಿಮ್, ಮಕ್ಕಳ ಆಟದ ಮೈದಾನ, ವಿಶ್ರಾಂತಿ ಕುರ್ಚಿಗಳ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
*
ಇದು ಆರು ವರ್ಷಗಳ ಯೋಜನೆಯಾಗಿದ್ದು, ಅಂದಾಜು ₹5 ಕೋಟಿ ವೆಚ್ಚದಲ್ಲಿ ವೃಕ್ಷವನ ನಿರ್ಮಾಣ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ.
-ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ.
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದ ಬಳಿಯಿರುವ ಎತ್ತಿನಗುಡ್ಡವನ್ನು ವೃಕ್ಷವನವನ್ನಾಗಿ (ಟ್ರೀ ಪಾರ್ಕ್) ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಆರಂಭಿಕ ಹಂತದಲ್ಲಿ ₹60 ಲಕ್ಷ ಹಣವೂ ಮಂಜೂರಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.