ಬೀದರ್: ಬಿಜೆಪಿ ಯುವ ಮುಖಂಡ ವಿಕ್ರಮ ಮುದಾಳೆ ಅವರು ನಗರದಲ್ಲಿ ಬಡ ಮಕ್ಕಳು, ನಿರ್ಗತಿಕರು ಹಾಗೂ ವೃದ್ಧರಿಗೆ ನೆರವಾಗುವ ಮೂಲಕ ತಮ್ಮ 38ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಸ್ನೇಹಿತರ ಬಳಗದೊಂದಿಗೆ ನಗರದ ಕೇಂದ್ರ ಬಸ್ ನಿಲ್ದಾಣ, ದೇವಿ ಕಾಲೊನಿಯ ದೇವಿ ಮಂದಿರ, ಕೆಇಬಿ ಹನುಮಾನ ಮಂದಿರ ಪ್ರದೇಶಕ್ಕೆ ತೆರಳಿ ಚಳಿಗಾಲ ಕಾರಣ ವೃದ್ಧರು ಹಾಗೂ ನಿರ್ಗತಿಕರಿಗೆ ಹೊದಿಕೆಗಳನ್ನು ವಿತರಿಸಿದರು.
ವಿದ್ಯಾನಗರ ಕಾಲೊನಿಯ ಅಮರ ಚಾಚಾ ಜವಾಹರಲಾಲ್ ನೆಹರೂ ಅನಾಥಾಶ್ರಮದಲ್ಲಿ ಮಕ್ಕಳಿಗೆ ಟೂತ್ ಪೇಸ್ಟ್, ಬ್ರಶ್, ಸಾಬೂನು, ಬಿಸ್ಕತ್, ಸಿಹಿ ಎಣ್ಣೆ ಸೇರಿದಂತೆ ದಿನಬಳಕೆ ವಸ್ತು ವಿತರಣೆ ಮಾಡಿದರು. ಬಳಿಕ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯಕ್ಕೆ ಅಕ್ಕಿ ದೇಣಿಗೆಯಾಗಿ ನೀಡಿದರು.
ವಿಕ್ರಮ ಮುದಾಳೆ ಅವರು ಸಾಮಾಜಿಕ ಚಟುವಟಿಕೆ ಮೂಲಕ ಜನ್ಮದಿನ ಆಚರಿಸಿಕೊಂಡಿದ್ದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖರಾದ ಕೆ. ಸಿದ್ಧರಾಮೇಶ್ವರ ರೆಡ್ಡಿ, ನಾಗರಾಜ ಬೆಲ್ದಾಳೆ, ದತ್ತಾತ್ರಿ ವಿಶ್ವಕರ್ಮ, ವಿನಾಯಕ ಮುದಾಳೆ ಇದ್ದರು.
ಬಿಜೆಪಿ ಯುವ ಮುಖಂಡ ವಿಕ್ರಮ ಮುದಾಳೆ ಅವರು ನಗರದಲ್ಲಿ ಬಡ ಮಕ್ಕಳು, ನಿರ್ಗತಿಕರು ಹಾಗೂ ವೃದ್ಧರಿಗೆ ನೆರವಾಗುವ ಮೂಲಕ ತಮ್ಮ 38ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.