ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲ ಬೇಧಿಸಿರುವ ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು 84 ಗ್ರಾಂ ಕೊಕೇನ್, 40 ಗ್ರಾಂ ಎಂಡಿಎಂಎ, ಹಶೀಶ್ ಹಾಗೂ ಗಾಂಜಾ ಜಪ್ತಿ ಮಾಡಿದ್ದಾರೆ. ನೈಜೀರಿಯಾದ ಪ್ರಜೆ ಹಾಗೂ ಚೆನ್ನೈನ ಮೂವರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
‘ಬಂಧಿತ ನೈಜೀರಿಯಾದ ಪ್ರಜೆ ಡ್ರಗ್ಸ್ ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದ. ಪೆಡ್ಲರ್‌ಗಳು ಈತನಿಂದ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದರು. ಅದನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ ಅಲ್ಲಿನ ಹೋಟೆಲ್, ಪಬ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು. ಚೆನ್ನೈನ ಪೆಡ್ಲರ್‌ಗಳು ನೈಜೀರಿಯಾದ ಪ್ರಜೆಯಿಂದ ಮಾದಕ ವಸ್ತು ಖರೀದಿಸಲು ಎಲೆಕ್ಟ್ರಾನಿಕ್ ಸಿಟಿಗೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ ನಾಲ್ವರನ್ನೂ ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನೈಜೀರಿಯಾದ ಪ್ರಜೆಯು ವಿವಿಧ ಮಾದಕ ವಸ್ತುಗಳನ್ನು ಮಿಶ್ರಣ ಮಾಡಿ ಸೇವಿಸುವುದರ ಬಗ್ಗೆ ಖರೀದಿದಾರರಿಗೆ ಮಾಹಿತಿ ನೀಡುತ್ತಿದ್ದ. ಹಾಗೆ ಸೇವಿಸುವುದರಿಂದ ‘ನಶೆ’ ಹೆಚ್ಚಿಸಿಕೊಳ್ಳಬಹುದು ಎಂದೂ ತಿಳಿಸುತ್ತಿದ್ದ. ಬಂಧಿತ ಮೂವರು ಪೆಡ್ಲರ್‌ಗಳು ತಮಿಳುನಾಡಿನ ವಿವಿಧ ಭಾಗಗಳಿಗೆ ಡ್ರಗ್ಸ್ ಮಾರುತ್ತಿದ್ದರು. ಇವರ ವಿರುದ್ಧ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಹಾಗೂ ಕೇರಳದಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು’ ಎಂದು ಮಾಹಿತಿ ನೀಡಿದ್ದಾರೆ.
ಮಾದಕ ವಸ್ತು ಮಾರಾಟ ಜಾಲ ಬೇಧಿಸಿರುವ ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು 84 ಗ್ರಾಂ ಕೊಕೇನ್, 40 ಗ್ರಾಂ ಎಂಡಿಎಂಎ, ಹಶೀಶ್ ಹಾಗೂ ಗಾಂಜಾ ಜಪ್ತಿ ಮಾಡಿದ್ದಾರೆ. ನೈಜೀರಿಯಾದ ಪ್ರಜೆ ಹಾಗೂ ಚೆನ್ನೈನ ಮೂವರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.