ಬೆಂಗಳೂರು: 300 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವ ಮತ್ತು 643 ಡೀಸೆಲ್ ಬಸ್‌ಗಳನ್ನು(ಬಿಎಸ್–6) ಖರೀದಿಸುವ ಪ್ರಸ್ತಾವಗಳಿಗೆ ಬಿಎಂಟಿಸಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.
ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚವನ್ನು ಕಿಲೋ ಮೀಟರ್‌ಗೆ ₹48.90 ನಿಗದಿ ಮಾಡಿದ್ದ ಅಶೋಕ್ ಲೇಲ್ಯಾಂಡ್ ಕಂಪನಿಗೆ ಕಾರ್ಯಾದೇಶ ನೀಡಲು ಮಂಡಳಿ ಅನುಮೋದನೆ ನೀಡಿದೆ. ಇತರ ಕಂಪನಿಗಳು ಇದಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದ್ದರಿಂದ ಅವುಗಳನ್ನು ಕೈಬಿಡಲಾಗಿದೆ.
12 ಮೀಟರ್ ಉದ್ದದ 43 ಆಸನಗಳ ಸಾಮರ್ಥ್ಯದ ಎಲೆಕ್ಟ್ರಿಕ್ ಬಸ್ ದಿನಕ್ಕೆ ಕನಿಷ್ಠ 225 ಕಿ.ಮೀ ಸಂಚಾರ ಆಗಬೇಕು. ಆಗದಿದ್ದರೂ, ಅದರ ಮೊತ್ತವನ್ನು(11 ಸಾವಿರ) ಪಾವತಿಸಬೇಕು ಎಂಬ ಒಪ್ಪಂದ ಏರ್ಪಡಲಿದೆ. ಚಾಲಕ ಮತ್ತು ಬಸ್‌ನ ಬ್ಯಾಟರಿ ಚಾರ್ಜಿಂಗ್ ಸೇರಿ ಬಸ್ ನಿರ್ವಹಣೆ ಹೊಣೆ ಕಂಪನಿಯದ್ದು. ನಿರ್ವಾಹಕರನ್ನು ಮತ್ತು ಚಾರ್ಜಿಂಗ್ ಪಾಯಿಂಟ್‌ಗಳಿಗೆ ಜಾಗವನ್ನು ಬಿಎಂಟಿಸಿಯೇ ಒದಗಿಸಲಿದೆ.
ಇದಲ್ಲದೇ 643 ಡೀಸೆಲ್ ಬಸ್‌ಗಳ ಖರೀದಿಗೂ ಮಂಡಳಿ ಒಪ್ಪಿಗೆ ನೀಡಿದೆ. ಕಡಿಮೆ ದರ ನಿಗದಿ ಮಾಡಿರುವ ಅಶೋಕ್ ಲೇಲ್ಯಾಂಡ್ ಕಂಪನಿಯಿಂದಲೇ ಬಸ್‌ಗಳನ್ನು ಖರೀದಿ ಮಾಡಲು ಮಂಡಳಿ ತೀರ್ಮಾನಿಸಿದೆ. ಪ್ರತಿ ಬಸ್‌ಗೆ ₹33 ಲಕ್ಷ ದರ ನಿಗದಿಯಾಗಿದೆ.
2017–18ನೇ ಸಾಲಿನಲ್ಲಿ ನಿಗದಿಯಾಗಿದ್ದ ಅನುದಾನ ಬಳಸಿಕೊಂಡು ಬಸ್‌ಗಳ ಖರೀದಿಗೆ ತೀರ್ಮಾನಿಸಲಾಗಿದೆ ಎಂದು ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎಲೆಕ್ಟ್ರಾನಿಕ್ ಟಿಕೆಟ್ ಮೆಷೀನ್ (ಇಟಿಎಂ) ಖರೀದಿ, ನಿರ್ಭಯಾ ಯೋಜನೆಯಡಿ ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೂ ಮಂಡಳಿ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.
ನೌಕರರ ಮರುನೇಮಕ ಸಿಎಂ ತೀರ್ಮಾನಕ್ಕೆ
ಮುಷ್ಕರದ ವೇಳೆ ವಜಾಗೊಂಡಿದ್ದ ಬಿಎಂಟಿಸಿ ನೌಕರರ ಮರುನೇಮಕದ ವಿಷಯವನ್ನು ಮುಖ್ಯಮಂತ್ರಿ ಅವರ ತೀರ್ಮಾನಕ್ಕೆ ಬಿಡಲು ಸಭೆ ತೀರ್ಮಾನಿಸಿದೆ.
ಪದೇ ಪದೇ ಕರ್ತವ್ಯಕ್ಕೆ ಗೈರು ಹಾಜರಾಗುವ ಸಿಬ್ಬಂದಿಯ ವಜಾ ಆದೇಶ ವಾಪಸ್ ಪಡೆಯದಿರಲು ನಿರ್ಧರಿಸಲಾಗಿದೆ. ಮುಷ್ಕರದಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ಕ್ರಮ ಜರುಗಿಸಿದ್ದರೆ ಅವರನ್ನು ಸೇವೆಗೆ ಮರಳಿ ಕರೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
300 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವ ಮತ್ತು 643 ಡೀಸೆಲ್ ಬಸ್‌ಗಳನ್ನು(ಬಿಎಸ್–6) ಖರೀದಿಸುವ ಪ್ರಸ್ತಾವಗಳಿಗೆ ಬಿಎಂಟಿಸಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.