ADVERTISEMENT

‘ಆಕಾಶ್‌’ ವಿದ್ಯಾರ್ಥಿ ವೇತನಕ್ಕೆ ಡಿ.4ರಿಂದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 19:40 IST
Last Updated 12 ಅಕ್ಟೋಬರ್ 2021, 19:40 IST
ನಗರದಲ್ಲಿ ಮಂಗಳವಾರ 'ಆಕಾಶ್’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಅವರು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯ (ಆಂಥೆ–2021) ಪೋಸ್ಟರ್ ಅನಾವರಣ ಮಾಡಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ವರುಣ್ ಸೋನಿ ಮತ್ತು ಉಪ ನಿರ್ದೇಶಕ ಕೆ. ವೆಂಕಟ ರವಿಕಾಂತ ಇದ್ದರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ 'ಆಕಾಶ್’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಅವರು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯ (ಆಂಥೆ–2021) ಪೋಸ್ಟರ್ ಅನಾವರಣ ಮಾಡಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ವರುಣ್ ಸೋನಿ ಮತ್ತು ಉಪ ನಿರ್ದೇಶಕ ಕೆ. ವೆಂಕಟ ರವಿಕಾಂತ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ’ಆಕಾಶ್‌’ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪರೀಕ್ಷೆ ಡಿಸೆಂಬರ್‌ 4ರಿಂದ 12ರವರೆಗೆ ನಡೆಯಲಿದೆ.

‘ಆಕಾಶ್‌ ನ್ಯಾಷನಲ್‌ ಟ್ಯಾಲೆಂಟ್‌ ಹಂಟ್‌ ಎಕ್ಸಾಮ್‌’ (ಆಂಥೆ) ಅನ್ನು 7ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದು, ಶೇಕಡ 100ರವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಎಲ್ಲ ತರಗತಿಗಳ ಪೈಕಿ ಉತ್ತಮ ಸಾಧನೆ ಮಾಡುವ ಐವರಿಗೆ ಮತ್ತು ಒಬ್ಬ ಪಾಲಕರಿಗೆ ನಾಸಾಗೆ ಭೇಟಿ ನೀಡಲು ಉಚಿತ ಪ್ರವಾಸದ ಅವಕಾಶವನ್ನು ಪಡೆಯಲಿದ್ದಾರೆ’ ಎಂದು ‘ಆಕಾಶ್‌’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಧೀರಜ್‌ ಕುಮಾರ್‌ ಮಿಶ್ರಾ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2010ರಿಂದ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿ ವೇತನದ ಜತೆಗೆ ಹೆಚ್ಚು ಅಂಕಗಳಿಸಿದವರಿಗೆ ನಗದು ಪುರಸ್ಕಾರ ಮತ್ತು ಉಚಿತವಾಗಿ ಸ್ಕೂಲ್‌ ಬೂಸ್ಟರ್‌ ಕೋರ್ಸ್‌ ಸಹ ದೊರೆಯಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ಬಾರಿಯ ಆಂಥೆಯನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿನ ಎಲ್ಲ ಆಕಾಶ್‌ ಇನ್‌ಸ್ಟಿಟ್ಯೂಟ್‌ನ 215ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬೆಳಿಗ್ಗೆ 10.30ರಿಂದ 11.30ರವರೆಗೆ ಮತ್ತು ಸಂಜೆ 4ರಿಂದ 5ಗಂಟೆಯವರೆಗೆ ಕೋವಿಡ್‌–19 ಮಾರ್ಗಸೂಚಿಗೆ ಬದ್ಧವಾಗಿ ಪರೀಕ್ಷೆಗಳು ನಡೆಯಲಿವೆ’ ಎಂದು ಅವರು ವಿವರಿಸಿದರು.

ಸಾರಾಂಶ

 ’ಆಕಾಶ್‌’ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪರೀಕ್ಷೆ ಡಿಸೆಂಬರ್‌ 4ರಿಂದ 12ರವರೆಗೆ ನಡೆಯಲಿದೆ. ‘ಆಕಾಶ್‌ ನ್ಯಾಷನಲ್‌ ಟ್ಯಾಲೆಂಟ್‌ ಹಂಟ್‌ ಎಕ್ಸಾಮ್‌’ (ಆಂಥೆ) ಅನ್ನು 7ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದು, ಶೇಕಡ 100ರವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಎಲ್ಲ ತರಗತಿಗಳ ಪೈಕಿ ಉತ್ತಮ ಸಾಧನೆ ಮಾಡುವ ಐವರಿಗೆ ಮತ್ತು ಒಬ್ಬ ಪಾಲಕರಿಗೆ ನಾಸಾಗೆ ಭೇಟಿ ನೀಡಲು ಉಚಿತ ಪ್ರವಾಸದ ಅವಕಾಶವನ್ನು ಪಡೆಯಲಿದ್ದಾರೆ’ ಎಂದು ‘ಆಕಾಶ್‌’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಧೀರಜ್‌ ಕುಮಾರ್‌ ಮಿಶ್ರಾ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.