ADVERTISEMENT

ಧಾರ್ಮಿಕ ಕಾರ್ಯಕ್ರಮದಿಂದ ಒತ್ತಡ ದೂರ: ಶಾಸಕ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 14:23 IST
Last Updated 16 ಅಕ್ಟೋಬರ್ 2021, 14:23 IST
ಗೋಕಾಕದ ಕುರಬರ ದಡ್ಡಿಯಲ್ಲಿ ನಡೆದ ವಿಠ್ಠಲ ದೇವರ ಹಾಗೂ ಮುರಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಮುಖಂಡರು ಶನಿವಾರ ಸತ್ಕರಿಸಿದರು
ಗೋಕಾಕದ ಕುರಬರ ದಡ್ಡಿಯಲ್ಲಿ ನಡೆದ ವಿಠ್ಠಲ ದೇವರ ಹಾಗೂ ಮುರಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಮುಖಂಡರು ಶನಿವಾರ ಸತ್ಕರಿಸಿದರು   

ಗೋಕಾಕ: ‘ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮತ್ತು ಅದರಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಒತ್ತಡ ದೂರ ಅಗುವುದರೊಂದಿಗೆ ಮನಸ್ಸಿಗೆ ಶಾಂತಿ–ನೆಮ್ಮದಿ ಎಂಬ ಫಲ ಲಭಿಸುತ್ತದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕುರಬರ ದಡ್ಡಿಯ ವಿಠ್ಠಲ ದೇವರ ಹಾಗೂ ಮುರಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಭಾಗವಹಿಸಿ ದೇವರ ದರ್ಶನ ಪಡೆದು, ಜಾತ್ರಾ ಸಮಿತಿಯವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.

‘ಭಕ್ತಿ ಎನ್ನುವುದು ಮನಸ್ಸಿನಲ್ಲಿದ್ದರೆ ಸಾಕು. ಪ್ರತಿ ದಿನ ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿದರೆ, ದೇವರ ಅನುಗ್ರಹವಾಗುತ್ತದೆ. ನಾವು ಒಳ್ಳೆಯತನ ರೂಢಿಸಿಕೊಂಡರೆ ಇತರರಿಗೂ ಉತ್ತಮ. ಅದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಮುಖಂಡ ತುಕಾರಾಮ ಕಾಗಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಹನುಮಂತ ಕಾಳಮ್ಮನಗುಡಿ, ಹರೀಶ ಬೂದಿಹಾಳ, ವಿಜಯ ಜತ್ತಿ, ಕೆಂಚಪ್ಪ ಗೌಡರ, ರಾಯಪ್ಪ ಗೋಟೆನ್ನವರ ಇದ್ದರು.

ಸಾರಾಂಶ

‘ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮತ್ತು ಅದರಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಒತ್ತಡ ದೂರ ಅಗುವುದರೊಂದಿಗೆ ಮನಸ್ಸಿಗೆ ಶಾಂತಿ–ನೆಮ್ಮದಿ ಎಂಬ ಫಲ ಲಭಿಸುತ್ತದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.