ದೇವನಹಳ್ಳಿ: ‘ಸುಮಾರು 60-70 ವರ್ಷಕ್ಕೂ ಹಳೆಯ ಮರಗಳನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಬೆಸ್ಕಾಂ ಸಿಬ್ಬಂದಿ ಮರಗಳನ್ನು ಕಡೆದು ಹಾಕಿದ್ದಾರೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎಂ.ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ತಾಲ್ಲೂಕಿನ ಬೆಸ್ಕಾಂ ಕಚೇರಿ ಆವರಣದಲ್ಲಿ ಇದ್ದ ಮರಗಳನ್ನು ವಾರಾಂತ್ಯದ ಕರ್ಫ್ಯೂವಿನ ಸಮಯದಲ್ಲಿ ಸಿಬ್ಬಂದಿ ಮರಗಳನ್ನು ಕಡಿದು ಹಾಕಿದ್ದು, ಯಾವುದೇ ಸೂಕ್ತವಾದ ಟೆಂಡರ್ ಇಲ್ಲದೇ ಈ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.
‘ಯಾವುದೇ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಟಿಂಬರ್ ಲಾಭಿಯಿಂದ ಅನಧಿಕೃತವಾಗಿ ಮರಗಳನ್ನು ಹತ್ಯೆ ಮಾಡಲಾಗಿದೆ. ಈ ಮರಗಳ ಮೇಲೆ ಯಾವುದೇ ರೀತಿಯ ವಿದ್ಯುತ್ ತಂತಿಗಳು ಇರುವುದಿಲ್ಲ. ಆದರೂ ಈ ರೀತಿ ಕೃತ್ಯ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪರಿಸರ ನಾಶ ಮಾಡಲು ಬೆಸ್ಕಾಂ ಸಿಬ್ಬಂದಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ಲಿಖಿತವಾಗಿ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ತಿಳಿಸಿದರು.
ಸ್ಥಳೀಯರಾದ ಕೆ.ಮುನಿರಾಜು ಮಾತನಾಡಿ, ‘ಸಾರ್ವಜನಿಕರು ಮರಗಳನ್ನು ಕಡಿದು ಹಾಕಿರುವ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಜಾಗದಲ್ಲಿ ಮರ ತೆಗೆಯಲು ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಬೇಜಬಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಈ ಕುರಿತು ಲಿಖಿತವಾಗಿ ದೂರು ನೀಡಿದ್ದರು ಅರಣ್ಯ ಇಲಾಖೆಯಾಗಲಿ ಅಥವಾ ಬೆಸ್ಕಾಂ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದರು.
ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಮರ ತೆಗೆದಿದ್ದಾರೆ. ಲಕ್ಷಾಂತರ ಬೆಲೆ ಬಾಳುವ ಮರಗಳನ್ನು ಟಿಂಬರ್ ರವರ ಲಾಬಿಗಾಗಲಿ ಸೂಕ್ತ ಟೆಂಡರ್ ಕರೆಯಾದೆ, ಜಾಹೀರಾತು ನೀಡದೇ ಕಾನೂನು ಉಲ್ಲಂಘನೆ ಮಾಡಿ ಕೃತ್ಯ ಎಸಗಿದ್ದಾರೆ ಎಂದರು.
ಸತತ ಎರಡು ದಿನಗಳಿಂದ ವಲಯ ಅರಣ್ಯಾಧಿಕಾರಿಗಳನ್ನು ’ಪ್ರಜಾವಾಣಿ‘ ಪೋನ್ ಮೂಲಕ ಹಾಗೂ ಕಚೇರಿಯಲ್ಲಿ ಭೇಟಿ ಮಾಡಲು ಪ್ರಯತ್ನ ಮಾಡಲಾಗಿದ್ದು, ಯಾವುದೇ ಸೂಕ್ತ ಉತ್ತರ ಸಿಗಲಿಲ್ಲ. ಹಾಗೂ ಬೆಸ್ಕಾಂ ಹಿರಿಯ ಅಧಿಕಾರಿ ಎಇಇ ಅವರನ್ನು ಕರೆ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ನೀಡಲಿಲ್ಲ.
ದೇವನಹಳ್ಳಿ: ‘ಸುಮಾರು 60-70 ವರ್ಷಕ್ಕೂ ಹಳೆಯ ಮರಗಳನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಬೆಸ್ಕಾಂ ಸಿಬ್ಬಂದಿ ಮರಗಳನ್ನು ಕಡೆದು ಹಾಕಿದ್ದಾರೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎಂ.ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.