ADVERTISEMENT

ಹೊಸಪೇಟೆ: ಸಮೀಕ್ಷೆಯಲ್ಲಿ ಹೆಸರು ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 11:50 IST
Last Updated 16 ಅಕ್ಟೋಬರ್ 2021, 11:50 IST
ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಮುಖಂಡರು ಶನಿವಾರ ಹೊಸಪೇಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು
ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಮುಖಂಡರು ಶನಿವಾರ ಹೊಸಪೇಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ(ವಿಜಯನಗರ): 2007-08ನೆ ಸಾಲಿನಲ್ಲಿ ನಡೆದ ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರ ಸಮೀಕ್ಷೆ ಪಟ್ಟಿಯಲ್ಲಿ ನಮೂದಾಗದ ಮಹಿಳೆಯರ ಹೆಸರು ಸೇರಿಸುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಆಗ್ರಹಿಸಿದೆ.

ಈ ಸಂಬಂಧ ಸಮಿತಿ ಸದಸ್ಯರು ಶನಿವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ದೇವದಾಸಿ ಪುನರ್ವ‌ಸತಿ ಯೋಜನೆ ಅಡಿಯಲ್ಲಿ 2007-08ರಲ್ಲಿ ದೇವದಾಸಿ ಮಹಿಳೆಯರ ಸಮೀಕ್ಷೆ ನಡೆಸಿ ಪಟ್ಟಿ ಮಾಡಲಾಗಿತ್ತು. ಆ ಪಟ್ಟಿಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 1,951 ಫಲಾನುಭವಿಗಳ ಹೆಸರು ಕೈಬಿಟ್ಟು ಹೋಗಿದ್ದು, ಬಿಟ್ಟು ಹೋದವರ ಹೆಸರು ಸೇರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಮಿತಿ ರಾಜ್ಯ ಸಂಘಟಕ ಎ.ಮಾನಯ್ಯ, ಅಂಬೇಡ್ಕರ್ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಸಿ.ವೀರಸ್ವಾಮಿ, ಮುಖಂಡರಾದ ಸೋಮಶೇಖರ್ ಚೆಳ್ಳಗುರ್ಕಿ, ಎ.ಈಶ್ವರಪ್ಪ, ವಿಘ್ನೇಶ್, ಎಚ್.ಸೋಮಶೇಖರ್, ಸೋಮಶೇಖರ್ ಬಣ್ಣದಮನೆ, ನಿಂಬಗಲ್ ರಾಮಕೃಷ್ಣ, ಡಿ.ಎಚ್. ದುರುಗೇಶ್, ಕೆ.ದೇವದಾಸ್, ತಮ್ಮನೆಳ್ಳಪ್ಪ, ಟಿ.ಎಚ್.ಎರ್ರಿಸ್ವಾಮಿ ಇದ್ದರು.

ಸಾರಾಂಶ

2007-08ನೆ ಸಾಲಿನಲ್ಲಿ ನಡೆದ ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರ ಸಮೀಕ್ಷೆ ಪಟ್ಟಿಯಲ್ಲಿ ನಮೂದಾಗದ ಮಹಿಳೆಯರ ಹೆಸರು ಸೇರಿಸುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಆಗ್ರಹಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.