ADVERTISEMENT

ಕಂಪ್ಲಿ: ಚೌಡೇಶ್ವರಿ ಜಯಂತ್ಯುತ್ಸವ ವೈಭವ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 6:38 IST
Last Updated 19 ಜುಲೈ 2023, 6:38 IST

ಕಂಪ್ಲಿ: ಇಲ್ಲಿಯ ತೊಗಟವೀರ ಕ್ಷತ್ರಿಯ ನೇಕಾರ ಸಮುದಾಯ ಭವನದಲ್ಲಿ ತೊಗಟವೀರ ಕ್ಷತ್ರಿಯ ನೇಕಾರ ಮಹಿಳಾ ಸಂಘದಿಂದ ಚೌಡೇಶ್ವರಿ ಜಯಂತ್ಯುತ್ಸವ ಮತ್ತು ವನ ಮಹೋತ್ಸವ ಕಾರ್ಯಕ್ರಮ ಈಚೆಗೆ ಆಯೋಜಿಸಲಾಗಿತ್ತು.

ನೇಕಾರ ಸಮುದಾಯಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಬಿ. ಬ್ರಹ್ಮಯ್ಯ ಮಾತನಾಡಿ, ಚೌಡೇಶ್ವರಿದೇವಿಯನ್ನು ಮನಃಪೂರ್ವಕವಾಗಿ ಪೂಜಿಸುವುದರಿಂದ ನಮ್ಮ ಮನಸ್ಸು ಮತ್ತು ದೇಹವನ್ನು ಆಕ್ರಮಿಸಿಕೊಂಡಿರುವ ದುಷ್ಟಶಕ್ತಿಗಳು ನಾಶವಾಗುತ್ತವೆ. ದೇವಿ ಜ್ಞಾನವನ್ನು, ಉತ್ತಮ ಗುಣಗಳನ್ನು ದಯಪಾಲಿಸುತ್ತಾಳೆ ಎಂದರು.

ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ 150 ಸಸಿಗಳನ್ನು ಆಯ್ದ ಸ್ಥಳಗಳಲ್ಲಿ ನೆಡಲಾಯಿತು.

ADVERTISEMENT

ಮಹಿಳಾ ಸಂಘದ ಅಧ್ಯಕ್ಷೆ ಎಂ. ರಮಣಮ್ಮ, ಗೌರವ ಅಧ್ಯಕ್ಷೆ ಜಿ. ಕೊಂಡಮ್ಮ, ಕಮಲಮ್ಮ, ಸಂಪೂರ್ಣಮ್ಮ, ತೊಗಟವೀರ ಕ್ಷತ್ರಿಯ ನೇಕಾರ ಸಂಘದ ಕಾರ್ಯದರ್ಶಿ ಜಿ. ಸುಧಾಕರ, ಪ್ರಮುಖರಾದ ಎಂ. ಶ್ರೀನಿವಾಸ, ಎಂ. ವೆಂಕಟಕೊಂಡಯ್ಯ, ಪಲ್ಲ ನಾಗರಾಜ, ವೆಂಕಟಪ್ಪ, ಗರಡಿ ವಿರುಪಾಕ್ಷಿ, ಜಿ. ಸುರೇಶ, ಎಂ. ಈಶ್ವರ, ಜೆ. ವೀರೇಶ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.