‘ಈ ಚುನಾವಣೆ ಸ್ವಾಭಿಮಾನ–ಗಾಂಧಿ ಕುಟುಂಬದ ನಡುವಿನ ಹೋರಾಟ’
ದಗ: ‘ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ವಾಭಿಮಾನ ಇದ್ದರೆ, ಈ ಮಣ್ಣಿನ ಮೇಲೆ ಪ್ರೀತಿ ಇದ್ದರೆ ರಾಹುಲ್ ಗಾಂಧಿಯನ್ನು ವಿರೋಧಿಸ
ಬೇಕು’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.
ಗದಗ ನಗರದಲ್ಲಿ ಗುರುವಾರ ಬೃಹತ್ ಶೋ ನಡೆಸಿದ ಅವರು ಮಾರ್ಗ ಮಧ್ಯೆ ಮಾತನಾಡಿ, ‘ಒಂದು ಕಡೆ ಮಾತೃಭೂಮಿಯನ್ನು ತಾಯಿ ಅಂತ ಬಿಜೆಪಿ ಪೂಜಿಸುತ್ತದೆ. ಮತ್ತೊಂದು ಕಡೆ ರಾಷ್ಟ್ರದ ಹೊರಗೆ ನಿಂತು ಕಾಂಗ್ರೆಸ್ ದೇಶದ ನಿಂದನೆ ಮಾಡುತ್ತದೆ. ರಾಜ್ಯ
ದಲ್ಲಿ ನಡೆಯುವ ಚುನಾವಣೆ ರಾಜ್ಯಕ್ಕೆ ಮಾತ್ರ ಸಂಬಂಧಿಸಿಲ್ಲ; ಇದೊಂದು ರಾಷ್ಟ್ರದ ಸ್ವಾಭಿಮಾನ ಮತ್ತು ರಾಷ್ಟ್ರಕ್ಕೆ
ಅಪಮಾನ ಮಾಡುವ ರಾಹುಲ್ ಗಾಂಧಿಯ ಕುಟುಂಬದ ನಡುವಿನ ಹೋರಾಟವಾಗಿದೆ’ ಎಂದು ಅವರು ಹೇಳಿದರು.
ಕಾಂಗ್ರೆಸ್ ಪ್ರತಿಭಟನೆ: ಸ್ಮೃತಿ ಇರಾನಿ ಅವರು ರೋಡ್ ಶೋ ನಡೆಸುವ ವೇಳೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.