ADVERTISEMENT

ಜಾರ್ಖಂಡ್ | ಅನುಕಂಪದ ನೌಕರಿಗೆ ಪತಿಯನ್ನು ಕೊಲೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ

ಜಾರ್ಖಂಡ್ | ಅನುಕಂಪದ ನೌಕರಿಗೆ ಪತಿಯನ್ನು ಕೊಲೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ

Abdul Rahiman
Published 18 ಮಾರ್ಚ್ 2023, 8:40 IST
Last Updated 18 ಮಾರ್ಚ್ 2023, 8:40 IST
ಕಾಂಗ್ರೆಸ್‌
ಕಾಂಗ್ರೆಸ್‌   

ಚಾಯ್‌ಬಾಸ: ರೈಲ್ವೆಯಲ್ಲಿ ಅನುಕಂಪದ ಉದ್ಯೋಗ ಪಡೆಯಲು ಪತಿಯನ್ನು ಕೊಲೆ ಮಾಡಿದ ಪತ್ನಿಗೆ ಜಾರ್ಖಾಂಡ್‌ನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಅನಿತಾ ಕುಮಾರಿ ಅಲಿಯಾಸ್‌ ಅನಿತಾ ಸಿಂಗ್‌ ಎಂಬವರೇ ಜೀವಾವಧಿ ಶಿಕ್ಷೆಗೆ ಗುರಿಯಾದವರು.

ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ತಮ್ಮ ಪತಿ ರಾಜೀವ್‌ ಕುಮಾರ್‌ ಸಿಂಗ್‌ ಎಂಬವರನ್ನು 2017ರ ಜನವರಿ 25 ರಂದು ಕೊಲೆ ಮಾಡಿದ್ದರು. ಅನುಕಂಪದ ಆಧಾರದಲ್ಲಿ ಪತಿಯ ನೌಕರಿ ತನಗೆ ಸಿಗಲಿದೆ ಎನ್ನುವ ಕಾರಣಕ್ಕೆ ಕೃತ್ಯ ಎಸಗಿದ್ದರು.

ADVERTISEMENT

ಕೊಲೆ ಮಾಡಿದ ಬಳಿಕ ಮೃತದೇಹವನ್ನು ಸೀಲಿಂಗ್‌ ಫ್ಯಾನ್‌ಗೆ ನೇತು ಹಾಕಿದ್ದರು. ಪ್ರಕರಣದಲ್ಲಿ ಅನಿತಾ ಪಾತ್ರವಿರುವುದು ತನಿಖೆಯಲ್ಲಿ ಗೊತ್ತಾದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

2007ರಲ್ಲಿ ರಾಜೀವ್‌ – ಅನಿತಾ ಅವರ ವಿವಾಹ ನಡೆದಿತ್ತು. ಆದರೆ ಅವರಿಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರಿಂದ ಅವರ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಈ ನಡುವೆ 2013ರಲ್ಲಿ ರಾಜೀವ್‌ ಅವರಿಗೆ ರೈಲ್ವೆಯಲ್ಲಿ ಡಿ ಗ್ರೂಪ್‌ ನೌಕರನಾಗಿ ನೌಕರಿ ಲಭಿಸಿತ್ತು. ಹೀಗಾಗಿ ಅನಿತಾ ಮತ್ತೆ ತನ್ನ ಪತಿ ಬಳಿ ಬಂದಿದ್ದರು.

ರೈಲ್ವೆಯ ಕ್ವಾಟ್ರಸ್‌ನಲ್ಲಿ ತನ್ನ ಮಗಳೊಂದಿಗೆ ದಂಪತಿ ವಾಸವಾಗಿದ್ದರು. ಇಲ್ಲಿಯೇ ಅನಿತಾ ಪತಿಯನ್ನು ಕೊಲೆ ಮಾಡಿ ಸೀಲಿಂಗ್‌ ಫ್ಯಾನ್‌ಗೆ ತೂಗು ಹಾಕಿದ್ದರು.

ಸದೀರ್ಘ ತನಿಖೆ ಬಳಿಕ ಇದೀಗ ಅನಿತಾ ಅವರ ಮೇಲಿದ್ದ ಆರೋಪ ಸಾಬೀತಾಗಿದ್ದು, ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವನಾಥ್‌ ಶುಕ್ಲಾ ಅನಿತಾಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ ₹ 10,000 ದಂಡವನ್ನೂ ವಿಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.