ಎಲ್ಲರಿಗೂ ಶೋಭಕೃತ್ ಸಂವತ್ಸರದ ಯುಗಾದಿ ಶುಭಾಶಯಗಳು. ‘ಶೋಭಕೃತ್’ ಎಂದರೆ ‘ಹೊಳೆಯುವುದು’ ಎಂದರ್ಥ. ‘ಯುಗಾದಿ’ ಅಂದರೆ ಯುಗದ ಆರಂಭಕಾಲ. ಬ್ರಹ್ಮ ತನ್ನ ಸೃಷ್ಟಿಯನ್ನು ಆರಂಭಿಸಿದ ದಿನ. ಹಿಂದೂ ಪಂಚಾಂಗದ ಪ್ರಕಾರ ಇದು ವರ್ಷದ ಆರಂಭದ ದಿನ. ಶಾಲಿವಾಹನ ಮಹಾರಾಜರು ತಮ್ಮ ಶಕವರ್ಷವನ್ನು ಆರಂಭಿಸಿದ ದಿನ. ಈ ಸಂದರ್ಭದಲ್ಲಿ ಪ್ರಕೃತಿ ಸಹ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಎಲ್ಲಡೆಯೂ ಚಿಗುರು ಮತ್ತು ಹೂಗಳಿಂದ ತುಂಬಿರುತ್ತದೆ. ಇಂತಹ ಪ್ರಕೃತಿಯ ಜೊತೆ ಹೊಂದಿಕೊಳ್ಳುವುದೇ ಜೀವನಕಲೆ. ಚೈತ್ರಮಾಸದ ಭಾಗ್ಯವನ್ನು ಯುಗಾದಿ ಎಂದು ಕರೆಯುತ್ತೇವೆ.
ವರ್ಷಭವಿಷ್ಯ: ಈ ವರ್ಷ ಅತಿ ಕಡಿಮೆ ಅಥವಾ ಅತಿ ಹೆಚ್ಚು ಮಳೆ ಇರುತ್ತದೆ. ಫಲ ಬಿಡುವ ವೃಕ್ಷಗಳು ಚೆನ್ನಾಗಿ ಹಣ್ಣನ್ನು ಕೊಡುತ್ತವೆ. ಮಳೆಯ ಸಮೃದ್ಧಿ ಇರುತ್ತದೆ. ತರಿ ಹಾಗೂ ಖುಷ್ಕಿ ಬೆಳೆಗಳು ಉತ್ತಮವಾಗಿರುತ್ತವೆ. ಬೂದುಮಣ್ಣಿನಲ್ಲಿ ಹಾಗೂ ಕೆಮ್ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಚೆನ್ನಾಗಿ ಫಲಿಸುತ್ತವೆ. ಮೆಣಸು, ಸಾಸಿವೆ, ರಾಗಿ, ಲವಂಗ, ಏಲಕ್ಕಿ ಮೊದಲಾದ ಕಪ್ಪುಬೆಳೆಗಳು ಹೆಚ್ಚು ಇಳುವರಿ ಕೊಡುತ್ತವೆ. ಹೈನುಗಾರಿಕೆ ಚೆನ್ನಾಗಿ ಫಲಿಸುತ್ತದೆ. ರಾಷ್ಟ್ರದಲ್ಲಿ ರಾಜಕೀಯ ಸ್ಥಿರತೆ ಇರುತ್ತದೆ. ದೇಶಕ್ಕೆ ಉತ್ತಮ ಹೆಸರು, ಗೌರವ ಬರುತ್ತದೆ. ದೇಶದ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.