ADVERTISEMENT

ಟಿ.ಆರ್.‌ಅನಂತರಾಮು ಲೇಖನ | ಆಕಾಶದಿಂದ ಧರೆಗಿಳಿದ ಶಿಲೆ

ಉಲ್ಕೆಗಳ ಮಹತ್ವವಿರುವುದು ವಿ‍ಶ್ವದ ವಿಕಾಸದ ಚರಿತ್ರೆಯನ್ನು ಪುನರ್ವಿಮರ್ಶಿಸುವಂತೆ ಮಾಡುವಲ್ಲಿ

ಅಭಿಲಾಷ್ ಎಸ್‌.ಡಿ
Published 7 ಮಾರ್ಚ್ 2023, 6:10 IST
Last Updated 7 ಮಾರ್ಚ್ 2023, 6:10 IST
   

ಈ ಫೆಬ್ರುವರಿ ತಿಂಗಳಲ್ಲಷ್ಟೇ ‘ಹಸಿರು ಧೂಮಕೇತು’ ಭೂಮಿಯಿಂದ ಸುಮಾರು ನಾಲ್ಕು ಕೋಟಿ ಕಿಲೊಮೀಟರ್‌ ಆಚೆ ನಭದಲ್ಲಿ ಕಾಣಿಸಿಕೊಂಡು, ಜಗತ್ತಿನಾದ್ಯಂತ ಆಕಾಶ ವೀಕ್ಷಕರಲ್ಲಿ ಸಂಚಲನ ಉಂಟುಮಾಡಿತ್ತು. ಅದು ಬಂದ ದಾರಿಯಲ್ಲೇ ಹಿಂತಿರುಗಿದಾಗ ಜಗತ್ತು ಇನ್ನೊಂದು ವಿಚಾರದಲ್ಲೂ ವಿಸ್ಮಯಪಟ್ಟಿತ್ತು. ಮತ್ತೆ ಇದೇ ಧೂಮಕೇತು ಆಕಾಶದಲ್ಲಿ ಕಾಣಿಸಿಕೊಳ್ಳುವುದು ಮುಂದಿನ 50,000 ವರ್ಷಗಳ ನಂತರ. ಆ ಹೊತ್ತಿಗೆ ಈ ಭೂಮಿ ಏನಾಗಿರುತ್ತದೋ ಊಹೆಗೆ ನಿಲುಕದು. ಮನುಷ್ಯರು ಇಲ್ಲಿ ಉಳಿದಿರುತ್ತಾರೋ ಅಥವಾ ಅನ್ಯಗ್ರಹಗಳತ್ತ ಮುಖಮಾಡುತ್ತಾರೋ ಅದು ಕೂಡ ವಿಜ್ಞಾನಕಥೆಗೆ ವಸ್ತುವಾಗಬಹುದು, ಅಷ್ಟೆ...

ಆಕಾಶ ಆಗಿಂದಾಗ್ಗೆ ವಿಸ್ಮಯಗಳ ಸರಣಿಯನ್ನೇ ತೆರೆಯುತ್ತದೆ. ಇತ್ತೀಚಿನ ಸೇರ್ಪಡೆ ಎಂದರೆ, ಗುಜರಾತಿನಲ್ಲಿ ಹಿಂದಿನ ವರ್ಷದ ಆಗಸ್ಟ್‌ ತಿಂಗಳಲ್ಲಿ ರಾತ್ರಿಯಾಕಾಶದಲ್ಲಿ ಬೆಂಕಿಯ ಗೀರು ಮೂಡಿಸುತ್ತ ಬಿದ್ದ ಉಲ್ಕೆ ಎರಡು ಭಾಗಗಳಾಗಿ ನೆಲ ತಾಕಿದೊಡನೆ ಚೂರುಚೂರಾಗಿ ಹರಡಿಹೋದದ್ದು. ಬಹುತೇಕ ಉಲ್ಕೆಗಳು ಭೂಮಿಗೆ ಬೀಳುವುದೇ ವಿರಳ. ಹೆಚ್ಚಿನ ಪಾಲು ಆಕಾಶದಲ್ಲಿ ವಾಯುಗೋಳವನ್ನು ಪ್ರವೇಶಿಸುವಾಗ ಆ ಶಾಖಕ್ಕೆ ಉರಿದು ಭಸ್ಮವಾಗುವುದು ಸರ್ವೇಸಾಮಾನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ADVERTISEMENT

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.