ಪ್ರಜಾವಾಣಿ ವಾರ್ತೆ
ಬೆಂಗಳೂರು: 2022–23ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಶೈಕ್ಷಣಿಕ ಜಿಲ್ಲೆಗಳಾದ ಬೆಂಗಳೂರು ದಕ್ಷಿಣ 10 (ಶೇ 82.3) ಹಾಗೂ ಬೆಂಗಳೂರು ಉತ್ತರ 11ನೇ (ಶೇ 82.25) ಸ್ಥಾನ ಪಡೆದಿವೆ.
ಕಳೆದ ಸಾಲಿನಲ್ಲಿ ದಕ್ಷಿಣ ಶೇ 76.24 ಹಾಗೂ ಉತ್ತರವು 72.01 ಫಲಿತಾಂಶ ಪಡೆದುಕೊಂಡಿತ್ತು.
ನಗರದ ವಿವಿಧ ಕಾಲೇಜು ಆವರಣಗಳಿಗೆ ಬಂದಿದ್ದ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಿ ಖುಷಿಪಟ್ಟರು. ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಪಿಯು ಕಾಲೇಜು ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.
ನಗರದ ವಿವಿಧೆಡೆಯ ರೇವಾ ಕಾಲೇಜಿನ ವಿದ್ಯಾರ್ಥಿಗಳು, ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಕೊಟ್ಟೆಗೇನಹಳ್ಳಿಯ ರೇವಾ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ 99.5 ಫಲಿತಾಂಶ ಬಂದಿದೆ. ಈ ಕ್ಯಾಂಪಸ್‌ನ 189 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗಂಗಾನಗರ ಕ್ಯಾಂಪಸ್‌ನ ಕಾಲೇಜಿಗೆ ಶೇ 97 ಹಾಗೂ ಸಂಜಯ್ ನಗರದ ಕಾಲೇಜಿಗೆ ಶೇ 92 ಫಲಿತಾಂಶ ಬಂದಿದೆ.
‘ವಿದ್ಯಾರ್ಥಿಗಳ ಸಾಧನೆಯು ಹೆಮ್ಮೆ ತಂದಿದೆ’ ಎಂದು ರೇವಾ ಗ್ರೂಪ್‌ನ ಮುಖ್ಯಸ್ಥ ಡಾ.ಪಿ.ಶ್ಯಾಮ ರಾಜು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.