ಅಹಮದಾಬಾದ್ (ಗುಜರಾತ್): ಆಕೆಗೆ ವಯಸ್ಸು 58. ಕೇವಲ 8 ತಿಂಗಳ ಹಿಂದಷ್ಟೇ ಆಕೆಯ ಪತಿ ಮೃತಪಟ್ಟಿದ್ದರು. ವಿಧವೆಯಾದ ಆಕೆಗೆ 34 ವರ್ಷ ವಯಸ್ಸಿನ ಮಗ ಇದ್ದಾನೆ. ಇದೀಗ ಈ ಮಹಿಳೆ ತನ್ನ ಮಗನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿದ ಕಾರಣ ಅಪಘಾತ ಸಂಭವಿಸಿ ತಾನು ಗಾಯಗೊಂಡಿರೋದಾಗಿ ತಾಯಿ ದೂರು ಕೊಟ್ಟಿದ್ದಾರೆ. ಈ ಘಟನೆ ನಡೆದಿರೋದು ಗುಜರಾತ್ ರಾಜ್ಯದ ನಾಡಿಯಾಡ್ ಎಂಬಲ್ಲಿ..!
ನಾಡಿಯಾಡ್ ನಿವಾಸಿ ಮೀನಾ ಪಟೇಲ್ ಅವರು ತಮ್ಮ ಮಗ ಆನಂದ್ ವಿರುದ್ಧ ಗುಜರಾತ್‌ನ ವಸೋ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ತಮ್ಮ ದೂರಿನಲ್ಲಿ ಪಟೇಲ್ ಅವರು ತಮಗಾದ ನೋವನ್ನು ಸಮಗ್ರವಾಗಿ ತೋಡಿಕೊಂಡಿದ್ದಾರೆ.
ಮೀನಾ ಪಟೇಲ್ ಅವರ ಮಗ ಆನಂದ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾರೆ. ಈತ ಆಫೀಸ್‌ಗೆ ಹೋಗುವ ದಾರಿಯಲ್ಲೇ ಅವರ ತಾಯಿಗೆ ಸ್ವಲ್ಪ ಕೆಲಸ ಇತ್ತು. ಹೀಗಾಗಿ, ತಮ್ಮನ್ನು ಅಲ್ಲಿಗೆ ಡ್ರಾಪ್ ಮಾಡುವಂತೆ ತಾಯಿ ಮಗನಿಗೆ ಕೇಳಿಕೊಂಡಿದ್ದಾರೆ. ಆದರೆ, ಅದೇ ದಿನ ಆನಂದ್ ಅವರ ಬೈಕ್ ಕೆಟ್ಟು ಹೋಗಿತ್ತು. ಹೀಗಾಗಿ ಸ್ನೇಹಿತನ ಬೈಕ್ ಪಡೆದುಕೊಂಡ ಆನಂದ್ ತಾಯಿಯನ್ನು ಕರೆದುಕೊಂಡು ಹೊರಟಿದ್ದಾನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.