ಬೆಂಗಳೂರು: ಶ್ರೀ ಚೈತನ್ಯ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿರುವ ಡಿಜಿಟಲ್ ಕಲಿಕಾ ವೇದಿಕೆ ಇನ್ಫಿನಿಟಿ ಲರ್ನ್‌ಗೆ ಕ್ರಿಕೆಟ್ ಆಟಗಾರ ರೋಹಿತ್ ಶರ್ಮ ಅವರು ಬ್ರ್ಯಾಂಡ್ ರಾಯಭಾರಿಯಾಗಿ ಕೆಲಸ ಮಾಡಲಿದ್ದಾರೆ.
‘ಮಾರುಕಟ್ಟೆ ವಿಸ್ತರಣೆ ಯೋಜನೆಯ ಭಾಗವಾಗಿ ಶರ್ಮ ಅವರನ್ನು ಆಯ್ಕೆ ಮಾಡಲಾಗಿದೆ. ನಮ್ಮ ಬ್ರ್ಯಾಂಡ್ ಚಟುವಟಿಕೆಗಳು ಮತ್ತು ಬಹುಮಾಧ್ಯಮ ಮಾರುಕಟ್ಟೆ ಅಭಿಯಾನದಲ್ಲಿ ಶರ್ಮ ಅವರು ಇರಲಿದ್ದಾರೆ. ಶರ್ಮ ಜೊತೆಗಿನ ಪಾಲುದಾರಿಗೆ ಮೂಲಕ ನಾವು ನಮ್ಮ ಬ್ರ್ಯಾಂಡ್‌ಅನ್ನು ಇನ್ನಷ್ಟು ಬಲಪಡಿಸಲಿದ್ದೇವೆ’ ಎಂದು ಪ್ರಕಟಣೆ ಹೇಳಿದೆ.
ಇನ್ಫಿನಿಟಿ ಲರ್ನ್ ಮೂಲಕ ಶ್ರೀ ಚೈತನ್ಯ ಶೈಕ್ಷಣಿಕ ಸಂಸ್ಥೆಗಳ ಜೊತೆ ನಂಟು ಬೆಳೆಸಿಕೊಂಡಿರುವುದಕ್ಕೆ ಸಂತಸ ಆಗುತ್ತಿದೆ ಎಂದು ಶರ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀ ಚೈತನ್ಯ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿರುವ ಡಿಜಿಟಲ್ ಕಲಿಕಾ ವೇದಿಕೆ ಇನ್ಫಿನಿಟಿ ಲರ್ನ್‌ಗೆ ಕ್ರಿಕೆಟ್ ಆಟಗಾರ ರೋಹಿತ್ ಶರ್ಮ ಅವರು ಬ್ರ್ಯಾಂಡ್ ರಾಯಭಾರಿಯಾಗಿ ಕೆಲಸ ಮಾಡಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.