ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು
Published 25 ಸೆಪ್ಟೆಂಬರ್ 2022, 10:51 IST Last Updated 25 ಸೆಪ್ಟೆಂಬರ್ 2022, 10:51 IST IIFL ವೆಲ್ತ್ ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ.
IIFL ವೆಲ್ತ್ ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ.ಅದಾನಿ ಗ್ರೂಪ್ ಚೇರ್ಮನ್ ಗೌತಮ್ ಅದಾನಿ, ಅಂಬಾನಿಯವರನ್ನು ಹಿಂದಿಕ್ಕಿ, ದೇಶದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ಆಸ್ತಿ ಮೌಲ್ಯ ಒಟ್ಟು ₹10,94,400 ಕೋಟಿ.ರಿಲಯನ್ಸ್ ಗ್ರೂಪ್ ಚೇರ್ಮನ್ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದ ಒಟ್ಟು ಆಸ್ತಿ ₹7,94,700 ಕೋಟಿ ಇದ್ದು, ಎರಡನೇ ಸ್ಥಾನದಲ್ಲಿದ್ದಾರೆ.ಪೂನವಾಲ ಗ್ರೂಪ್ ಚೇರ್ಮನ್ ಸೈರಸ್ ಪೂನವಾಲ ಮತ್ತು ಅವರ ಕುಟುಂಬ ಮೂರನೇ ಸ್ಥಾನದಲ್ಲಿದ್ದು, ಅಂದಾಜು ₹2,05,400 ಕೋಟಿ ಮೌಲ್ಯದ ಆಸ್ತಿ ಹೊಂದಿದೆ.ಎಚ್ಸಿಎಲ್ ಗ್ರೂಪ್ನ ಶಿವ್ ನಾಡರ್ ಮತ್ತು ಕುಟುಂಬ ₹1,85,800 ಕೋಟಿ ಮೌಲ್ಯದ ಆಸ್ತಿ ಹೊಂದಿದೆ.ಡಿ-ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ಮತ್ತು ಕುಟುಂಬದ ಒಟ್ಟು ಆಸ್ತಿ ₹1,75,100 ಕೋಟಿ ಇದ್ದು, ದೇಶದ ಐದನೇ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿದ್ದಾರೆ.ಅದಾನಿ ಕುಟುಂಬದ ವಿನೋದ್ ಶಾಂತಿಲಾಲ್ ಅದಾನಿ, ಮತ್ತು ಅವರ ಮನೆಯವರ ಒಟ್ಟು ಆಸ್ತಿ ₹1,69,000 ಕೋಟಿ ಇದೆ.ಹಿಂದುಜಾ ಸಮೂಹದ ಎಸ್ಪಿ ಹಿಂದುಜಾ ಮತ್ತು ಕುಟುಂಬ, ₹1,65,000 ಕೋಟಿ ಆಸ್ತಿ ಹೊಂದುವ ಮೂಲಕ ಏಳನೇ ಸಿರಿವಂತ ಭಾರತೀಯ ಎನ್ನಿಸಿಕೊಂಡಿದ್ದಾರೆ.ಎಂಟನೇ ಸ್ಥಾನದಲ್ಲಿರುವ ಎಲ್ ಎನ್ ಮಿತ್ತಲ್ ಮತ್ತು ಅವರ ಕುಟುಂಬ, ₹1,51,800 ಕೋಟಿ ಆಸ್ತಿ ಹೊಂದಿದೆ.ಸನ್ ಫಾರ್ಮಾ ಸ್ಥಾಪಕ ದಿಲೀಪ್ ಸಾಂಘ್ವಿ ಅವರು ಒಂಬತ್ತನೇ ಸ್ಥಾನದಲ್ಲಿದ್ದು, ₹1,33,500 ಕೋಟಿ ಆಸ್ತಿ ಹೊಂದಿದ್ದಾರೆ.IIFL ವೆಲ್ತ್ ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಉದಯ್ ಕೋಟಕ್ ₹1,19,400 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.