ನವದೆಹಲಿ: ರತ್ನ ಮತ್ತು ಆಭರಣಗಳ ರಫ್ತು 2021ರ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ಶೇ 5.76ರಷ್ಟು ಹೆಚ್ಚಾಗಿದ್ದು, ₹ 2.15 ಲಕ್ಷ ಕೋಟಿಗಳಿಗೆ ತಲುಪಿದೆ.
ಅಮೆರಿಕ, ಹಾಂಗ್‌ಕಾಂಗ್ ಮತ್ತು ಥಾಯ್ಲೆಂಡ್‌ನಿಂದ ಉತ್ತಮ ಬೇಡಿಕೆ ಬಂದಿದ್ದರಿಂದ ರಫ್ತು ಪ್ರಮಾಣ ಹೆಚ್ಚಾಗಿದೆ ಎಂದು ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.
ಅಮೆರಿಕ, ಹಾಂಗ್‌ಕಾಂಗ್, ಥಾಯ್ಲೆಂಡ್ ಮತ್ತು ಇಸ್ರೇಲ್‌ನಲ್ಲಿ ರಜಾದಿನ ಮತ್ತು ಹಬ್ಬದ ಬೇಡಿಕೆಯು ಹೆಚ್ಚಾಗಿದೆ. ಈ ಬೇಡಿಕೆಯು ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗೂ ಮುಂದುವರಿಯುವ ನಿರೀಕ್ಷೆ ಇದ್ದು, ರಫ್ತು ಮೌಲ್ಯವು ₹ 3.08 ಲಕ್ಷ ಕೋಟಿ ಗುರಿಯ ಸಮೀಪಕ್ಕೆ ಬರಲಿದೆ ಎಂದು ಮಂಡಳಿಯ ಅಧ್ಯಕ್ಷ ಕೋಲಿನ್ ಶಾ ಹೇಳಿದ್ದಾರೆ.
ಬೆಳ್ಳಿ ಆಭರಣಗಳ ರಫ್ತು ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ಶೇ 94ರಷ್ಟು ಹೆಚ್ಚಾಗಿ ₹ 14,504 ಕೋಟಿಗಳಿಗೆ ತಲುಪಿದೆ ಎಂದು ಮಂಡಳಿಯು ಮಾಹಿತಿ ನೀಡಿದೆ.
ರತ್ನ ಮತ್ತು ಆಭರಣಗಳ ರಫ್ತು 2021ರ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ಶೇ 5.76ರಷ್ಟು ಹೆಚ್ಚಾಗಿದ್ದು, ₹ 2.15 ಲಕ್ಷ ಕೋಟಿಗಳಿಗೆ ತಲುಪಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.