ಬೆಂಗಳೂರು: ಭೀಮ ಜುವೆಲರ್ಸ್ನ ಮೊದಲ ರಾಯಭಾರಿ ಆಗಿ ನಟಿ ಪೂಜಾ ಹೆಗ್ಡೆ ಅವರನ್ನು ನೇಮಿಸಲಾಗಿದೆ. ತನ್ನ 97 ವರ್ಷಗಳ ಇತಿಹಾಸದಲ್ಲಿ ಬ್ರ್ಯಾಂಡ್ ರಾಯಭಾರಿಯನ್ನು ನೇಮಿಸುತ್ತಿರುವುದು ಇದೇ ಮೊದಲು ಎಂದು ಕಂಪನಿಯು ತಿಳಿಸಿದೆ.
‘ಹೊಸ ಮಾರುಕಟ್ಟೆಗಳು ಮತ್ತು ಹೊಸ ಗ್ರಾಹಕರನ್ನು ತಲುಪಲು ಪೂಜಾ ಹೆಗ್ಡೆ ಅವರು ನಮಗೆ ನೆರವಾಗಲಿದ್ದಾರೆ’ ಎಂದು ಭೀಮ ಜುವೆಲರ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಮುಖ ಬ್ರ್ಯಾಂಡ್ನೊಂದಿಗೆ ಸಹಭಾಗಿ ಆಗಿರುವುದು ನನಗೆ ಅತ್ಯಂತ ವಿಶೇಷವಾದ ಕ್ಷಣ’ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.
ಭೀಮ ಜುವೆಲರ್ಸ್ನ ಬೆಂಗಳೂರಿನ ರಾಯಭಾರಿ ಆಗಿ ನಟಿ ಪೂಜಾ ಹೆಗ್ಡೆ ಅವರನ್ನು ನೇಮಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.