ADVERTISEMENT

ಈ ಬಾರಿ ದಾಖಲೆ ಪ್ರಮಾಣದಲ್ಲಿ ಕೃಷಿ ಉತ್ಪನ್ನ ರಫ್ತು?

ನವದೆಹಲಿ (ಪಿಟಿಐ):
Published 20 ಜನವರಿ 2022, 16:41 IST
Last Updated 20 ಜನವರಿ 2022, 16:41 IST

ನವದೆಹಲಿ: ಕೃಷಿ ಉತ್ಪನ್ನಗಳ ರಫ್ತು ಪ್ರಮಾಣವು ಏಪ್ರಿಲ್‌–ನವೆಂಬರ್ ಅವಧಿಯಲ್ಲಿ ಶೇಕಡ 23.21ರಷ್ಟು ಹೆಚ್ಚಳವಾಗಿದ್ದು, ₹ 3.71 ಲಕ್ಷ ಕೋಟಿಯ (50 ಬಿಲಿಯನ್ ಅಮೆರಿಕನ್ ಡಾಲರ್) ಗಡಿಯನ್ನು ಇದೇ ಮೊದಲ ಬಾರಿಗೆ ದಾಟುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ರಫ್ತು ಪ್ರಮಾಣ ಹೆಚ್ಚಿಸಲು ಸಚಿವಾಲಯವು ಹಲವು ಕ್ರಮಗಳನ್ನು ಕೈಗೊಂಡಿದೆ. ಅಕ್ಕಿ (ಬಾಸ್ಮತಿ ಹೊರತುಪಡಿಸಿ), ಗೋಧಿ, ಸಕ್ಕರೆ, ಇತರ ಧಾನ್ಯಗಳ ರಫ್ತು ಪ್ರಮಾಣದಲ್ಲಿ ಇದುವರೆಗೆ ಆರೋಗ್ಯಕರ ಬೆಳವಣಿಗೆ ಕಂಡುಬಂದಿದೆ.

ಇದರಿಂದಾಗಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸಗಡ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ರೈತರಿಗೆ ಪ್ರಯೋಜನ ಆಗಿದೆ ಎಂದು ಸಚಿವಾಲಯ ಹೇಳಿದೆ.

ADVERTISEMENT
ಸಾರಾಂಶ

ಕೃಷಿ ಉತ್ಪನ್ನಗಳ ರಫ್ತು ಪ್ರಮಾಣವು ಏಪ್ರಿಲ್‌–ನವೆಂಬರ್ ಅವಧಿಯಲ್ಲಿ ಶೇಕಡ 23.21ರಷ್ಟು ಹೆಚ್ಚಳವಾಗಿದ್ದು, ₹ 3.71 ಲಕ್ಷ ಕೋಟಿಯ (50 ಬಿಲಿಯನ್ ಅಮೆರಿಕನ್ ಡಾಲರ್) ಗಡಿಯನ್ನು ಇದೇ ಮೊದಲ ಬಾರಿಗೆ ದಾಟುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.