ADVERTISEMENT

ಎಂಜಿ ಆಸ್ಟರ್‌ ಬಿಡುಗಡೆ; ಬೆಲೆ ₹ 9.78 ಲಕ್ಷದಿಂದ ಆರಂಭ

ನವದೆಹಲಿ (ಪಿಟಿಐ):
Published 11 ಅಕ್ಟೋಬರ್ 2021, 10:57 IST
Last Updated 11 ಅಕ್ಟೋಬರ್ 2021, 10:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿ ‘ಆಸ್ಟರ್‌’ ಬಿಡುಗಡೆ ಮಾಡಿದೆ. ಈ ಮೂಲಕ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವನ್ನು ಪ್ರವೇಶಿಸಿದೆ. ಇದು ಪರಿಚಯಾತ್ಮಕ ಬೆಲೆಯು ₹ 9.78 ಲಕ್ಷದಿಂದ (ಎಕ್ಸ್‌ ಷೊರೂಂ) ಆರಂಭ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

ಇದೇ ತಿಂಗಳ 21ರಿಂದ ಕಂಪನಿಯ ಜಾಲತಾಣ ಮತ್ತು ವಿತರಣಾ ಕೇಂದ್ರಗಳಲ್ಲಿ ಬುಕಿಂಗ್‌ ಆರಂಭ ಆಗಲಿದೆ. ಹೀಗಿದ್ದರೂ ಗ್ರಾಹಕರು ಇಂದಿನಿಂದಲೇ ಮುಂಚಿತವಾಗಿಯೇ ಕಾಯ್ದಿರಿಸಬಹುದಾಗಿದೆ ಎಂದು ಕಂಪನಿಯ ಭಾರತದ ಅಧ್ಯಕ್ಷ ರಾಜೀವ್‌ ಛಾಬಾ ಹೇಳಿದ್ದಾರೆ.

ಈ ಮಾದರಿಯು ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್‌ ಮತ್ತು ಸ್ಕೋಡಾ ಕುಶಾಕ್‌ ವಾಹನಗಳಿಗೆ ಪೈಪೋಟಿ ನೀಡುವ ನಿರೀಕ್ಷೆ ಮಾಡಲಾಗಿದೆ.

ADVERTISEMENT

5 ಸೀಟುಗಳ ಈ ಮಾದರಿಯು 220 ಟರ್ಬೊ ಪೆಟ್ರೋಲ್‌ ಎಂಜಿನ್‌ ಮತ್ತು ವಿಟಿಐ ಟೆಕ್‌ ಪೆಟ್ರೋಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ. ಟ್ರ್ಯಾಕ್ಷನ್‌ ಕಂಟ್ರೋಲ್‌ ಸಿಸ್ಟಂ, ಆರು ಏರ್‌ಬ್ಯಾಗ್‌, ಎಲೆಕ್ಟ್ರಿಕ್‌ ಪಾರ್ಕಿಂಗ್‌ ಬ್ರೇಕ್‌, ರೇನ್‌ ಸೆನ್ಸಿಂಗ್ ವೈಪರ್‌, 10.1 ಇಂಚು ಎಚ್‌ಡಿ ಎನ್ಫೊಟೇನ್ಮೆಂಟ್‌ ಸಿಸ್ಟಂ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ.

ಸಾರಾಂಶ

ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿ ‘ಆಸ್ಟರ್‌’ ಬಿಡುಗಡೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.