ADVERTISEMENT

test oct1 ಸ್ವಸ್ಥಿ ಪೊರೆದ ಅಳಿಲು ಮರಿಗಳು!

sub

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 9:05 IST
Last Updated 10 ಅಕ್ಟೋಬರ್ 2024, 9:05 IST
ಪಕ್ಷಿ ಮತ್ತು ಅಳಿಲು ತೊಟ್ಟಿಯಲ್ಲಿ ನೀರು ಕುಡಿಯುತ್ತಿರುವುದು
ಪಕ್ಷಿ ಮತ್ತು ಅಳಿಲು ತೊಟ್ಟಿಯಲ್ಲಿ ನೀರು ಕುಡಿಯುತ್ತಿರುವುದು   

att

ಬೀರಣ್ಣ ನಾಯಕ ಮೊಗಟಾ

ಅಳಿಲು ಸೇವೆ ಎನ್ನುವುದನ್ನು ಅರ್ಥವಾಗದ ದಿನದಿಂದಲೂ ಅದನ್ನು ಕೇಳುತ್ತ ಬೆಳದವರು ನಾವು. ಇದು ರಾಮಾಯಣದಿಂದ ಕೊಡುಗೆಯಾಗಿ ಬಂದ ‘ಅಳಿಲು ಸೇವೆ’ಯಲ್ಲ..ಇದು ’ಅಳುವಿನ ಸೇವೆ’!

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ನಮ್ಮ ಮನೆಯ ತೋಟದಲ್ಲಿ ಹಲವು ಸಣ್ಣ ಪುಟ್ಟ ಪ್ರಾಣಿಗಳು ಹಾಗೂ ಪಕ್ಷಿಗಳು ಬಿಡಾರ ಹೂಡುವುದು ಹೊಸತೇನಲ್ಲ. ಪಿಕಳಾರ ಪಕ್ಷಿ ಮನೆಯ ಕಿಟಕಿಯಲ್ಲಿಯೇ ಗೂಡು ಕಟ್ಟಿ ತನ್ನ ಸಂಸಾರ ಶುರು ಮಾಡಿದರೆ, ಅಳಿಲುಗಳು ನಿನಗೇನು ಕಡಿಮೆ ಎಂಬಂತೆ ಮನೆಯ ಎರಡು ಕಡೆ ನಾಲೈದು ವರ್ಷಗಳಿಂದ ತಾವೇ ಮೂಲಗೇಣಿದಾರರರು ಎನ್ನುವಂತೆ ಗೂಡು ಮಾಡಿ ವಾಸಿಸುತ್ತಿವೆ. ಒಂದು ಬಿಡಾರ ಕೆಳಮನೆಯಲ್ಲಿದ್ದರೆ, ಇನ್ನೊಂದು ಬಿಡಾರ ಮಾಳಿಗೆಯ ಮೇಲಿದೆ. ಈ ಪ್ರಾಣಿ ಪಕ್ಷಿಗಳಿಗೆ ನಮ್ಮ ಹೆದರಿಕೆ ಎಂಬುದೇ ಇಲ್ಲ. ಸಮಯಕ್ಕೆ ಅನುಸಾರವಾಗಿ ಅವುಗಳಿಗೆ ನಾವೇ ಹೆದರಬೇಕು!ಅಂದು ಭಾನುವಾರ. ಮಾಳಿಗೆಯ ಮೇಲಿನ ಅಳಿಲಿನ ಬಿಡಾರದಿಂದ ವಾಸನೆ ಬರಲು ಶುರುವಾಯಿತು. ಜೊತೆಗೆ ‘ಚಿಂವ್...ಚಿಂವ್...’ಎನ್ನುವ ದಯನೀಯ ಧ್ವನಿ ಬೇರೆ. ಅಳಿಲು ಗೂಡಿನ ಹತ್ತಿರ ಹೋಗಿ ನೋಡಿದಾಗ ಆಶ್ಚರ್ಯ ಮತ್ತು ಆಘಾತ ಕಾದಿತ್ತು. ತಾಯಿ ಅಳಿಲು ಯಾವುದೋ ಕಾರಣದಿಂದ ಅಸುನೀಗಿ ಕೊಳೆತು ವಾಸನೆ ಬರುತ್ತಿದ್ದರೆ, ಅದರ ಮೂವರು ಮರಿಗಳು ಹಸಿವನಿಂದ ‘ಚಿಂವ್...ಚಿಂವ್...’ಎನ್ನುತ್ತಾ ನಿತ್ರಾಣಗೊಂಡಿದ್ದವು. ಪ್ರಾಣಿ ಪಕ್ಷಗಳ ಕುರಿತು ಅಪಾರ ಪ್ರೀತಿ ಹೊಂದಿರುವ ಸ್ವಸ್ಥಿ ಭಟ್ಟ ಅವರು ಆ ಮರಿಗಳನ್ನು ಗೂಡಿನಿಂದ ಕೆಳಗಿಳಿಸಿ ಪ್ರಯಾಸ ಪಟ್ಟು ಹಾಲುಣಿಸಿದರು. ಹೊತ್ತು ಹೊತ್ತಿಗೆ ಚೇತರಿಸಿಕೊಂಡ ಮರಿಗಳು ನಿಧಾನವಾಗಿ ಹಣ್ಣಿCದರೆ  ಇಲ್ಲೇ ಇರಲು ಹಟ ಮಾಡುತ್ತವೆ.

ಈಗಾಗಲೇ ಈ ಮರಿಗಳಿಗೆ ನಾಮಕರಣ ಕೂಡಾ ಆಗಿದೆ. ಹೆಣ್ಣು ಮರಿಗಳು ಚಿಂಟು, ಚಾರು, ಗಂಡು ಮರಿಗೆ ಛೋಟು ಎಂದು ಹೆಸರಿಡಲಾಗಿದೆ. ಬೆಳೆದು ಹೊರಗೆ ಬದುಕುವ ಸಾಮರ್ಥ್ಯ ಬಂದ ನಂತರ ತೋಟದಲ್ಲಿ ಬಿಡುವಾಸೆ ಸ್ವಸ್ಥಿಯವರದು.

ಘಾತ ಕಾದಿತ್ತು. ತಾಯಿ ಅಳಿಲು ಯಾವುದೋ ಕಾರಣದಿಂದ ಅಸುನೀಗಿ ಕೊಳೆತು ವಾಸನೆ ಬರುತ್ತಿದ್ದರೆ, ಅದರ ಮೂವರು ಮರಿಗಳು ಹಸಿವನಿಂದ ‘ಚಿಂವ್...ಚಿಂವ್...’ಎನ್ನುತ್ತಾ ನಿತ್ರಾಣಗೊಂಡಿದ್ದವು. ಪ್ರಾಣಿ ಪಕ್ಷಗಳ ಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.