Visual ಕೊನೆಯ ಓವರ್‌ನಲ್ಲಿ 7 ರನ್‌ ಅಗತ್ಯವಿದ್ದಾಗ ಸ್ಯಾಮ್ ಕರನ್‌ 20ನೇ

ಶಿವಕುಮಾರ್ ಎಚ್ ಎಂ

ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ , ಈ ಮೊತ್ತಕ್ಕೆ ಕೊನೆಯ ಓವರ್‌ವರೆಗೂ ಪಂದ್ಯವನ್ನು ತೆಗೆದುಕೊಂಡು ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಈ ಪಂದ್ಯದಲ್ಲಿ ನಾವು ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗಿದೆ. ಡ್ರೆಸ್ಸಿಂಗ್ ಕೊಠಡಿಗೆ ಹೋಗಿ ಈ ಬಗ್ಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದ್ದಾರೆ. | ಹಾರ್ದಿಕ್
"ಕೊನೆಯ ಓವರ್‌ವರೆಗೂ ಹೋಗಿ ಪಂದ್ಯವನ್ನು ಗೆದ್ದಿರುವುದಕ್ಕೆ ನನಗೆ ತೃಪ್ತಿ ಇಲ್ಲ. ಡ್ರಾಯಿಂಗ್ ಬೋರ್ಡ್‌ಗೆ ನಾವು ಹೋಗಬೇಕಾದ ಅಗತ್ಯವಿದೆ. ಅಂದಹಾಗೆ ಪಂಜಾಬ್ ಕಿಂಗ್ಸ್ ತಂಡದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ನಮ್ಮ ಬ್ಯಾಟ್ಸ್‌ಮನ್‌ಗಳು ಕೂಡ ಅದೃಷ್ಠವಶಾತ್‌ ಚೆನ್ನಾಗಿ ಆಡಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ನಾವು ಹೆಚ್ಚಿನ ಅಪಾಯ ತೆಗೆದುಕೊಂಡು ದೊಡ್ಡ ಹೊಡೆತಗಳಿಗೆ ಕೈ ಹಾಕಬೇಕಾಗಿದೆ. ಆ ಮೂಲಕ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವುದನ್ನು ತಪ್ಪಿಸಬೇಕಾದ ಅಗತ್ಯವಿದೆ," ಎಂದು ಹಾರ್ದಿಕ್‌ ಪಾಂಡ್ಯ ತಿಳಿಸಿದ್ದಾರೆ. | ಅದೃಷ್ಠವಶಾತ್‌
"ಚೆಂಡು ಸ್ವಲ್ಪ ಒಣಗುತ್ತಿತ್ತು, ಆದರೆ ಇಲ್ಲಿನ ವಿಕೆಟ್‌ ಯೋಗ್ಯವಾಗಿತ್ತು. ಅಲ್ಜಾರಿ ಜೋಸೆಫ್‌ ಹಾಗೂ ಮೋಹಿತ್‌ ಶರ್ಮಾ ಅವರ ಬೌಲಿಂಗ್‌ ಬಗ್ಗೆ ನನಗೆ ಯಾವುದೇ ಅಚ್ಚರಿ ಇಲ್ಲ. ಇವರು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆ. ತಮ್ಮ ಸಮಯದವರೆಗೂ ಮೋಹಿತ್‌ ಶರ್ಮಾ ತಾಳ್ಮೆಯಿಂದ ಕಾದಿದ್ದಾರೆ. ಪಂಜಾಬ್‌ ಕಿಂಗ್ಸ್ ಈ ಪಂದ್ಯದಲ್ಲಿ ಗೆಲುವು ಪಡೆದಿದ್ದರೆ, ನಮ್ಮ ಪಾಲಿಗೆ ಸಂಗತಿಗಳು ಕಠಿಣವಾಗಿರುತ್ತಿದ್ದವು. ಹಾಗಾಗಿ ಪಂದ್ಯವನ್ನು ನಾವು ಆದಷ್ಟು ಬೇಗ ಮುಗಿಸಬೇಕಾಗಿತ್ತು. ಕೊನೆಯ ಓವರ್‌ನಲ್ಲಿ ಗೆಲ್ಲುವುದಕ್ಕೆ ನಾನು ದೊಡ್ಡ ಅಭಿಯಾನಿಯಲ್ಲ," ಎಂದು ಹಾರ್ದಿಕ್‌ ಪಾಂಡ್ಯ ತಿಳಿಸಿದ್ದಾರೆ. | ಅಮುಲ್

test vs ad - desc 1

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.