Raja K
ಅರ್ಜುನ್ ಸರ್ ನನ್ನನ್ನು ನೋಡಿ, ನಿಮ್ಮನ್ನು ನನ್ನ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು. ನಾನು ಯಾವುದೋ ಸಣ್ಣ ಪಾತ್ರಕ್ಕೆ ಎಂದುಕೊಂಡಿದ್ದೆ. ಆದರೆ ಅವರು ನನ್ನನ್ನು ನಾಯಕಿಯನ್ನಾಗಿಸಿದ್ದರು. ನನಗೆ ಅದನ್ನು ಮೊದಲು ಕೇಳಿದಾಗ ನಂಬಲು ಆಗಲಿಲ್ಲ. ‘ಕಿಸ್’ ನಂತರ ‘ಭರಾಟೆ’ ಸಿನಿಮಾದಲ್ಲಿಯೂ ನಟಿಸಿದೆ. ಎರಡೂ ಸಿನಿಮಾಗಳು ಕೆಲ ದಿನಗಳ ಅಂತರದಲ್ಲಿ ಬಿಡುಗಡೆಯಾದವು. ಈ ಸಮಯದಲ್ಲಿ ನನ್ನನ್ನು ಗಮನಿಸಿದ ತೆಲುಗಿನ ನಿರ್ದೇಶಕ ಕೆ ರಾಘವೇಂದ್ರ ರಾವ್ ಅವರು ‘ಪೆಳ್ಳಿ ಸಂದಡಿ’ ಸಿನಿಮಾಗಾಗಿ ಸಂಪರ್ಕಿಸಿದರು. ಅಂತಹ ದೊಡ್ಡ ನಿರ್ದೇಶಕರು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ಹಾಗೆ ನಾನು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟೆ’ ಎನ್ನುತ್ತಾ ತಮ್ಮ ಚಿತ್ರರಂಗ ಪ್ರವೇಶದ ಕಥೆಯನ್ನು ತೆರೆದಿಡುತ್ತಾರೆ ಶ್ರೀಲೀಲಾ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.